ಪಾಟ್ನಾ: ಬಿಹಾರದಲ್ಲಿ ಮತ ಎಣಿಕೆ ಆರಂಭಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಯಂತೆ ಮಹಾಮೈತ್ರಿ ಮುನ್ನಡೆಯಲ್ಲಿದೆ.
ಆರ್ಜೆಡಿ 61, ಬಿಜೆಪಿ 28, ಜೆಡಿಯು 23, ಕಾಂಗ್ರೆಸ್ 16, ಎಲ್ಜೆಪಿ 02, ಇತರರು 10 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. 2015ರ ಚುನಾವಣೆಯಲ್ಲಿ ಆರ್ಜೆಡಿ 80, ಬಿಜೆಪಿ 53, ಜೆಡಿಯು 71, ಕಾಂಗ್ರೆಸ್ 27 ಎಲ್ಜೆಪಿ 2, ಇತರರು 10 ಸ್ಥಾನ ಗೆದ್ದಿದ್ದರು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು 123 ಮ್ಯಾಜಿಕ್ ಸಂಖ್ಯೆಯಾಗಿದೆ.
Advertisement
15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುವ ನಿರೀಕ್ಷೆ ಇದೆ. ಆರ್ಜೆಡಿ, ಜೆಡಿಯು ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಸಿಎಂ ಆಗಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಅದರಲ್ಲೂ ಇಂಡಿಯಾ ಟುಡೇ-ಆಕ್ಸಿಸ್ ಸರ್ವೆ ಮತ್ತು ಟುಡೇಸ್ ಚಾಣಕ್ಯ ಸರ್ವೆ ಮಹಾಮೈತ್ರಿಕೂಟಕ್ಕೆ ಪ್ರಚಂಡ ಬಹುಮತವನ್ನು ಅಂದಾಜಿಸಿದೆ.