ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆ ಅಂತ್ಯವಾಗಿದ್ದು. ಮೂರು ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗಿದ್ದು ಮಹಾಘಟಬಂಧನ್ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸಿ – ವೋಟರ್ ಸೇರಿ ಹಲವು ಸಮೀಕ್ಷೆಗಳು ಬಿಹಾರದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟವಾದ ಬಹುಮತ ಇಲ್ಲ ಎಂದರೆ ಇನ್ನು ಹಲವು ಸಮೀಕ್ಷೆಗಳು ಎನ್ಡಿಎ ಮೈತ್ರಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಿವೆ. ಕೆಲವು ಸಮೀಕ್ಷೆಗಳು ಮಹಾಘಟಬಂಧನ್ ಈ ಬಾರಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ವರದಿ ನೀಡಿದರೆ ಚಾಣಕ್ಯ ಸೇರಿದಂತೆ ಹಲವು ಸಂಸ್ಥೆಗಳು ಬಿಹಾರದಲ್ಲಿ ಮಹಾಘಟಬಂಧನ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ.
Advertisement
#TCPoll#BiharElection2020
Seat Projection
BJP – JDU+ 55 ± 11 Seats
RJD – Cong+ 180 ± 11 Seats
Others 8 ± 4 Seats
— Today's Chanakya (@TodaysChanakya) November 7, 2020
Advertisement
Advertisement
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಹತ್ತಾರು ಮಂದಿ ಕೇಂದ್ರ ಸಚಿವರು ಸಿಎಂ ನಿತೀಶ್ ಕುಮಾರ್ ಸೇರಿ ರಾಜ್ಯ ಸಚಿವರು ಪ್ರಚಾರ ಮಾಡಿದ್ದರೂ ಈ ಬಾರಿ ಬಿಹಾರ ಜನರು ಆರ್ಜೆಡಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
Advertisement
ಎನ್ಡಿಎಗೆ ಹಿನ್ನಡೆಯಾಗಿದ್ದು ಹೇಗೆ?
ಮೂರು ಬಾರಿ ಅಧಿಕಾರ ನಡೆಸಿದ್ದ ನಿತೀಶ್ ಕುಮಾರ್ ಗೆ ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಗೆ ಪ್ರಧಾನಿ ಮೋದಿ ಹೊರತಾಗಿ ಪ್ರಬಲವಾದ ಮುಖ ರಾಜ್ಯ ಬಿಜೆಪಿಯಲ್ಲಿ ಇರಲಿಲ್ಲ. ಬಿಜೆಪಿ ಮಾಜಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕೊರೊನಾ ಬಂದಿದ್ದ ಕಾರಣ ಬಿಹಾರ ಪ್ರಚಾರಕ್ಕೆ ಬಂದಿರಲಿಲ್ಲ. ಹೀಗಾಗಿ ಈ ಬಾರಿ ತೇಜಸ್ವಿಯಾದವ್ ಕಡೆಗೆ ಜನರು ತಿರುಗಿರುವ ಸಾಧ್ಯತೆಗಳಿದೆ.
#TCPoll#BiharElection2020
Vote Projection
BJP – JDU+ 34% ± 3%
RJD – Cong+ 44% ± 3%
Others 22% ± 3%
— Today's Chanakya (@TodaysChanakya) November 7, 2020
ಜೆಡಿಯುಗೆ ಈ ಬಾರಿ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ದುಸ್ವಪ್ನವಾಗಿ ಕಾಡಿದ್ದಾರೆ. ಎನ್ಡಿಎ ಮೈತ್ರಿಯಿಂದ ಹೊರ ಬಂದಿದ್ದ ಎಲ್ಜೆಪಿ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಾತ್ರ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಬಿಜೆಪಿ ಮಹಾಘಟಬಂಧನ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಎಲ್ಜೆಪಿ ಸ್ಪರ್ಧೆ ಮಾಡಿರಲಿಲ್ಲ. ಇದು ಜೆಡಿಯುಗೆ ದೊಡ್ಡ ಹಿನ್ನಡೆಯಾಗಿದೆ. ಜೆಡಿಯುಗೆ ಸಿಗಬೇಕಿದ್ದ ಮತಗಳು ಈ ಬಾರಿ ಎಲ್ಜೆಪಿಗೂ ಪ್ರತ್ಯೇಕವಾಗಿ ವಿಭಜನೆಯಾಗಿದೆ. ಇದು ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಗೆಲುವಿಗೆ ಸಹಕಾರಿಯಾಗಿದೆ.
Check which government the youth of Bihar prefer in Vidhan Sabha.
Latest #ExitPoll updates: https://t.co/lU6Zh1IqPW#BiharExitPoll #BiharElection2020 #VoteOnBihar #BiharPolls pic.twitter.com/9V1CXCPcu6
— IndiaToday (@IndiaToday) November 7, 2020
ಬಿಹಾರದಲ್ಲಿ ದೊಡ್ಡ ಮಟ್ಟದ ಪ್ರಚಾರವೂ ಜನರ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಪ್ರಚಾರದಲ್ಲಿ ಕೊರೊನಾ ನಿರ್ವಹಣೆ, ನಿರುದ್ಯೋಗ, ಆರ್ಥಿಕ ಕುಸಿತ ಮತ್ತು ಬಿಹಾರ ಪ್ರವಾಹದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ನಿರುದ್ಯೋಗ ವಿಚಾರದಲ್ಲಿ ನಿತೀಶ್ ಕುಮಾರ್ ಮೂರು ಅವಧಿಯಲ್ಲಿ ಪರಿಣಾಮಕಾರಿ ಕೆಲಸ ಮಾಡಿಲ್ಲ ಎನ್ನುವ ವಾದ ಬಿಹಾರ ಜನರಲ್ಲಿತ್ತು. ಇದರ ಜೊತೆಗೆ ಲಾಕ್ಡೌನ್ ಅವಧಿಯಲ್ಲಿ ವಾಪಸ್ ಊರಿಗೆ ಮರಳಿದ್ದ ಜನರಿಗೆ ಸರಿಯಾದ ವ್ಯವಸ್ಥೆ ಮಾಡದ ಈ ಸಿಟ್ಟು ದುಪ್ಪಟ್ಟಾಗಿಸಿತ್ತು. ಇದು ಯುವಕರ ಮತಗಳು ಮಹಾಘಟಬಂಧನ್ ಕಡೆಗೆ ವಾಲುವಂತೆ ಮಾಡಿರಬಹುದು.
#Mahagathbandhan is projected to get 44 percent vote share as compared to #NDA’s 39 percent.
Latest #ExitPoll updates: https://t.co/lU6Zh1IqPW#BiharExitPoll #BiharElection2020 #VoteOnBihar #BiharPolls #IndiaTodayAxisPoll pic.twitter.com/rR7ZrBinPm
— IndiaToday (@IndiaToday) November 7, 2020
ಮೂರು ಅವಧಿಯಲ್ಲಿ ಸರ್ಕಾರ ಮುನ್ನಡೆಸಿದ್ದ ನಿತೀಶ್ ಕುಮಾರ್ ಅಭಿವೃದ್ಧಿ ಮೇಲೆ ಮತ ಕೇಳಬೇಕಿತ್ತು. ಆದರೆ ಈ ಬಾರಿ ಅವರು ಕಡೆಯ ಚುನಾವಣೆ ಅನ್ನೋ ಅನುಕಂಪ ಗಿಟ್ಟಿಸಿಕೊಳ್ಳಲು ಜೋತು ಬಿದ್ದರು. ಇದನ್ನು ತೇಜಸ್ವಿ ಯಾದವ್ ಸರಿಯಾಗಿ ಬಳಸಿಕೊಂಡಿದ್ದರು ಉದ್ಯೋಗ ಸೃಷ್ಟಿ ಮಾಡಿಲ್ಲ ನಿತೀಶ್ ಕುಮಾರ್ ಗೆ ವಯಸ್ಸಾಗಿದ್ದು ಅವರಿಂದ ಅಭಿವೃದ್ಧಿ ಅಸಾಧ್ಯ ಎಂದು ಹೇಳುತ್ತಾ ಬಂದಿದ್ದು ಮತದಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ಕಳೆದ ಎರಡು ವರ್ಷಗಳಿಂದ ಬಿಹಾರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭಗಳಲ್ಲಿ ಪರಿಣಾಮತ್ಮಾಕವಾಗಿ ಸರ್ಕಾರ ಕಾರ್ಯ ನಿರ್ವಹಿಸಿಲ್ಲ, ನಿತೀಶ್ ಕುಮಾರ್ ಸರ್ಕಾರ ಜನರ ಸಂಕಷ್ಟ ಸರಿಯಾಗಿ ಆಲಿಸಿಲ್ಲಎಂಬ ಆಕ್ರೋಶ ಜನರಲ್ಲಿ ಇತ್ತು. ಆದರೆ ಇದಕ್ಕೆ ವಿರುದ್ದ ಎನ್ನುವಂತೆ ಪ್ರವಾಹ ಮತ್ತು ಕೊರೊನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಕೆಲಸ ತೇಜಸ್ವಿ ಯಾದವ್ ಉತ್ತಮ ಕೆಲಸ ಮಾಡಿ ಜನ ಮನ್ನಣೆಗಳಿಸಿದ್ದರು.
Check who is going to form the new government in Bihar as per #IndiaTodayAxisPoll
Latest #ExitPoll updates: https://t.co/lU6Zh1IqPW#BiharExitPoll #BiharElection2020 #VoteOnBihar #BiharPolls pic.twitter.com/yXgramFZV0
— IndiaToday (@IndiaToday) November 7, 2020
ಬಾಲಿವುಡ್ನಲ್ಲಿ ಯಶಸ್ಸು ಕಾಣದೇ ತಂದೆಯ ಮರಣದ ನಂತರ ಏಕಾಏಕಿ ಚುನಾವಣಾ ರಾಜಕೀಯಕ್ಕೆ ಬಂದಿದ್ದ ಚಿರಾಗ್ ಪಾಸ್ವಾನ್ ಅವರನ್ನು ಬಿಹಾರ ಜನರು ಗಂಭೀರ ರಾಜಕಾರಣಿ ಎಂದು ಭಾವಿಸಿರಲಿಲ್ಲ. ಇವರ ಬದಲು ನಿರಂತರ ರಾಜಕಾರಣದಲ್ಲಿರುವ ತೇಜಸ್ವಿ ಪರ್ಯಾಯ ಎಂದು ಅವರನ್ನು ಜನರು ಒಪ್ಪಿಕೊಂಡಂತಿದೆ.
#Nov10WithTimesNow | POLL OF POLLS by different agencies for 2020 Bihar polls.
TIMES NOW – C-Voter:
NDA: 116
UPA: 120
LJP: 01
OTH: 06
JAN KI BAAT:
NDA: 104
UPA: 128
LJP: 07
OTH: 04
TV9 BHARATVARSH:
NDA: 115
UPA: 120
LJP: 04
OTH: 04
ETG:
NDA: 114
UPA: 120
LJP: 03
OTH: 06 pic.twitter.com/TTbafucZ8v
— TIMES NOW (@TimesNow) November 7, 2020
ಬಿಹಾರದಲ್ಲಿ ಮದ್ಯ ನಿಷೇಧವಾದರೂ ಕಾಳ ಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿತ್ತು. ಈ ಹಿನ್ನಲೆ ನಿರ್ಣಾಯಕ ಸಂಖ್ಯೆಯಲ್ಲಿರುವ ಮಹಿಳಾ ಮತಗಳು ಸರ್ಕಾರದ ವಿರುದ್ಧ ಚಲಾವಣೆಗೆಯಾಗದೇ ಇರುವ ಸಾಧ್ಯತೆಯಿದೆ.
ಕೊನೆಯಲ್ಲಿ ಬಿಜೆಪಿ ಬಳಸಿದ್ದು ಹಿಂದುತ್ವ ಟ್ರಂಪ್ ಕಾರ್ಡ್ ಕೂಡಾ ಇಲ್ಲಿ ಕೆಲಸ ಮಾಡಿಲ್ಲ. ಬಿಹಾರವನ್ನು ಸೀತೆಯ ತವರು ಅಂತಲೇ ಕರೆಯಲಾಗುತ್ತದೆ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಹೀಗಾಗಿ ಹಿಂದುತ್ವ ಅಲೆಗೆ ಇಲ್ಲಿ ಮನ್ನಣೆ ಸಿಕ್ಕಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.