ಬೆಂಗಳೂರು: ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಹೈ ಕೋರ್ಟ್ ಕೂಡ ಕೋವಿಡ್ ನಿರ್ವಹಣೆ ಕುರಿತು ಚಾಟಿ ಬೀಸಿತ್ತು.
Advertisement
Advertisement
ನಿನ್ನೆಯಷ್ಟೇ ಬೆಂಗಳೂರು ಲಾಕ್ಡೌನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅನಿಲ್ ಕುಮಾರ್ ಅವರು, ನಗರದಲ್ಲಿ ಕೋವಿಡ್ ಸೋಂಕಿನ ಸರಪಳಿಯ ಲಿಂಕ್ ತಪ್ಪಿಸಲು ಕನಿಷ್ಠ 15 ದಿನಗಳ ಲಾಕ್ಡೌನ್ ಅಗತ್ಯವಿದೆ. ಇದು ನನ್ನ ವೈಯಕಿಕ್ತ ಅಭಿಪ್ರಾಯ ಮಾತ್ರ. ಯಾವುದೇ ಚೈನ್ ಬ್ರೇಕ್ ಆಗಲು 15 ದಿನಗಳ ಸೈಕಲ್ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕನಿಷ್ಠ 15 ದಿನ ಲಾಕ್ಡೌನ್ ಅಗತ್ಯವಿದೆ ಎಂದು ಸಿಎಂ ಸಭೆಗೂ ಮುನ್ನ ಹೇಳಿದ್ದರು. ಆದರೆ ನಿನ್ನೆ ಸಿಎಂ ಬಿಎಸ್ವೈ ನಡೆಸಿದ ಅಷ್ಟದಿಕ್ಪಾಲಕರ ಸಭೆಯಿಂದ ಅನಿಲ್ ಕುಮಾರ್ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದರು. ಸಿಎಂ ಅವರ ಈ ನಡೆ ಅನುಮಾನಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.