-ಮುಂದಿನ ಸಿಎಂ ವಿಚಾರ ಈಗ ಅಪ್ರಸ್ತುತ
ಕಲಬುರಗಿ : ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎನ್ನುವ ವಿಚಾರ ಈಗ ಅಪ್ರಸ್ತುತ, ನಾವು ಬಹುಮತ ಬಂದಾಗ ಸಿಎಲ್ಪಿ ಸಭೆಯಲ್ಲಿ ಹೈಕಮಾಂಡ್ಗೆ ಶಾಸಕರ ಅಭಿಪ್ರಾಯ ತಿಳಿಸುತ್ತಾರೆ ಅಂತಾ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Advertisement
ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಖರ್ಗೆ, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂಬುದು ಕಾದು ನೋಡಬೇಕು. ನಮ್ಮ ಪಕ್ಷದಲ್ಲಿ ಅರ್ಹರು ಬಹಳಷ್ಟು ಜನ ಇದ್ದಾರೆ. ಹಾಗಾಗಿ ಸಿಎಂ ಹುದ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗೋ ಬಗ್ಗೆ ನಾವು ಯೋಚನೆ ಮಾಡಬೇಕು. ಬಿಜೆಪಿ ಮನೆಯೊಂದು ಮೂರು ಬಾಗಿಲು ಅಲ್ಲ. ಮನೆಯೊಂದು ನೂರೊಂದು ಬಾಗಿಲು ಅಂತಾ ವ್ಯಂಗ್ಯವಾಡಿದ್ದಾರೆ.
Advertisement
Advertisement
ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರು ಇಲ್ಲ, ಅವರ ಮನೆಯಲ್ಲಿರೋ ಸಮಸ್ಯೆ ಬಗೆಹರಿಸಿಕೊಳ್ಳಲಿ ಅಂತಾ ಟಾಂಗ್ ನೀಡಿದರು. ಇನ್ನೂ ಬಿಎಸ್ವೈ ಕುರಿತು ಸಿಪಿ ಯೋಗೇಶ್ವರ್ ಹೇಳಿಕೆ ಬಗ್ಗೆ ನಾನ್ಯಾಕೇ ಪ್ರತಿಕ್ರಿಯೆ ನೀಡಲಿ ಅಂತಾ ಮಾಧ್ಯಮಗಳಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್
Advertisement
ದಲಿತ ಸಿಎಂ ಕೇವಲ ಮಾಧ್ಯಮಗಳ ಹೆಡಲೈನ್ಗೆ ಸೀಮಿತ ಮೀಡಿಯಾದಲ್ಲಿ ಬಂದಾಗಷ್ಟೆ ದಲಿತ ಸಿಎಂ ವಿಚಾರ ಚರ್ಚೆಗೆ ಬರುತ್ತದೆ. ಖರ್ಗೆ ಮತ್ತು ಪರಮೇಶ್ವರರಿಗೆ ಸಿಎಂ ಆಗೋ ಅರ್ಹತೆ ಇರಲಿಲ್ವ, ಅವರ ಹೆಸರು ಬಂದಾಗ ದಲಿತ ಸಿಎಂ ಅಂತಾ ಮಾಧ್ಯಮಗಳಲ್ಲಿ ಹೆಡ್ ಲೈನ್ ಬರುತ್ತದೆ. ಆದರೆ ನಮ್ಮ ಸಮಾಜದವರಿಗೆ ಎಚ್ಚೆತ್ತುಕೊಂಡಿಲ್ಲವೊ ಗೊತ್ತಿಲ್ಲ ಎಂದು ಪ್ರೀಯಾಂಕ್ ಖರ್ಗೆ ಹೇಳಿದ್ದಾರೆ.