ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗೆ ಇಳಿದಿರಬಹುದು. ಆದರೆ ರಾಜ್ಯ ಬಿಜೆಪಿಗರ ಪಾಲಿಗೆ ಈಗಲೂ ಯಡಿಯೂರಪ್ಪ ಅವರೇ ಪವರ್ ಸೆಂಟರ್ ಆಗಿ ಉಳಿದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಯನ್ನು ಅಷ್ಟು ಗಂಭೀರವಾಗಿ ಪರಿಗಣಿಸದ ಬಿಜೆಪಿಯ ಒಂದು ಗುಂಪಿನ ನಾಯಕರು ಈಗಲೂ ಎಲ್ಲದಕ್ಕೂ ಯಡಿಯೂರಪ್ಪರನ್ನೇ ಅವಲಂಬಿಸಿದ್ದಾರೆ. ಯಾರೇ ಆಗಲಿ, ಸ್ಥಾನಮಾನ, ಖಾತೆ ವಿಚಾರ. ಹೀಗೆ ಏನೇ ವಿಚಾರ ಇದ್ದರೂ ಮೊದಲು ಯಡಿಯೂರಪ್ಪರನ್ನು ಭೇಟಿಯಾಗಿ, ನಂತರ ಬೊಮ್ಮಾಯಿಯವರನ್ನು ಭೇಟಿ ಮಾಡುತ್ತಿದ್ದಾರೆ.
Advertisement
Advertisement
ಏನೇ ಸಮಸ್ಯೆ ಬಂದರೂ ಯಡಿಯೂರಪ್ಪ ಅವರೇ ಟ್ರಬಲ್ ಶೂಟರ್ ಆಗಿ ಹೊರಹೊಮ್ಮುತ್ತಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯಲು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಬಹುತೇಕರು ಬಿಎಸ್ವೈ ಮನೆ ಕದ ತಟ್ಟಿದರು. ಖಾತೆ ಹಂಚಿಕೆಗೆ ಮುನ್ನ ಹಲವು ಸಚಿವರು ಯಡಿಯೂರಪ್ಪ ಮೂಲಕ ಒತ್ತಡ ಹಾಕಿಸುವ ಕೆಲಸ ಮಾಡಿದ್ದರು. ಪವರ್ ಫುಲ್ ಖಾತೆ ಸಿಕ್ಕಿಲ್ಲ ಎಂದು ಸಿಡಿದೆದ್ದಿರುವ ಆನಂದ್ ಸಿಂಗ್ ಕೂಡ, ಇವತ್ತು ಬೆಂಗಳೂರಿಗೆ ಬಂದವರೇ ನೇರವಾಗಿ ಹೋಗಿದ್ದು ಯಡಿಯೂರಪ್ಪ ಮನೆಗೆ. ಇದನ್ನೂ ಓದಿ: 1,826 ಪಾಸಿಟಿವ್, 33 ಸಾವು – ರಾಜ್ಯದಲ್ಲಿ 4 ಕೋಟಿ ಕೋವಿಡ್-19 ಪರೀಕ್ಷೆ
Advertisement
Advertisement
ರಾಜೂಗೌಡರನ್ನು ಹೊರಗಿಟ್ಟು ಸುಮಾರು 15 ನಿಮಿಷ ಆನಂದ್ ಸಿಂಗ್-ಬಿಎಸ್ವೈ ಮಾತುಕತೆ ನಡೆದಿತ್ತು. ನಂತರವೇ ಮುಖ್ಯಮಂತ್ರಿಗಳನ್ನು ಆನಂದ್ಸಿಂಗ್ ಭೇಟಿ ಮಾಡಿದ್ದು. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಯಡಿಯೂರಪ್ಪರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ.
ಟ್ವಿಟ್ಟರ್ನಲ್ಲಿ ಬಿಎಸ್ವೈ ಹಿಂಬಾಲಕರ ಸಂಖ್ಯೆ ಈಗ 10 ಲಕ್ಷ ದಾಟಿದೆ. ಸಿದ್ದರಾಮಯ್ಯ ಅವರನ್ನು 5.95 ಲಕ್ಷ ಮಂದಿ ಫಾಲೋ ಮಾಡಿದರೆ ಕುಮಾರಸ್ವಾಮಿ ಅವರನ್ನು 3.70 ಲಕ್ಷ, ಡಿಕೆ ಶಿವಕುಮಾರ್ ಅವರನ್ನು 3.57 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.