ಸದಾ ಮನೆ ಪೂರ್ತಿ ವಸ್ತುಗಳಿಂದ ತುಂಬಿ ತುಳುಕಾಡುತ್ತಿದ್ದ ಬಿಗ್ಬಾಸ್ ಮನೆ, ನಿನ್ನೆ ಖಾಲಿ ಖಾಲಿಯಾಗಿತ್ತು. ಮನೆಮಂದಿ ನೀರಿಲ್ಲದೆ ಬ್ರಶ್, ಸೋಪು, ಶ್ಯಾಂಪೂ, ಧರಿಸಲು ಬಟ್ಟೆ, ತಿನ್ನಲು ತಿಂಡಿ ಕೂಡ ಇಲ್ಲದೇ ಪರದಾಡಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಶುಭಾ ಪೂಂಜಾ ಬಿಗ್ಬಾಸ್ ಮುಂದೆ ಪೂರಿ ಸಾಗೂ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ.
Advertisement
ಹೌದು, ನಿನ್ನೆ ಮನೆಯಲ್ಲಿದ್ದ ವಸ್ತುಗಳೆಲ್ಲವನ್ನು ಬಿಗ್ಬಾಸ್ ವಶಪಡಿಸಿಕೊಂಡಿದ್ದಾರೆ. ಇದರಿಂದ ಈ ವಿಚಾರವಾಗಿ ಮನೆ ಮಂದಿ ಎಲ್ಲ ಆತಂಕಗೊಂಡು ಗಾರ್ಡನ್ ಏರಿಯಾದಲ್ಲಿ ಚರ್ಚೆ ನಡೆಸುತ್ತಿದ್ದರೆ, ಶುಭಾ ಪೂಂಜಾ ಮಾತ್ರ ನನಗೆ ಹೊಟ್ಟೆ ಹಸಿಯುತ್ತಿದೆ ಬಿಗ್ಬಾಸ್.. ಪೂರಿ ಸಾಗೂ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಅಲ್ಲದೇ ನನ್ನ ಬಳಿ ಒಂದೇ ನೈಟ್ ಡ್ರೆಸ್ ಇದೆ ಇನ್ನೆರಡು ನೈಟ್ ಡ್ರೆಸ್ ಕಳಹಿಸಿಕೊಡಿ ಎಂದಿದ್ದಾರೆ.
Advertisement
Advertisement
ಬ್ರಶ್ ಆಯ್ತು, ಪೂರಿ ಸಾಗೂ ಆಯ್ತು, ಈಗ ನೈಟ್ ಡ್ರೆಸ್ ಅಂತೆ ಎಂದು ದಿವ್ಯಾ ಉರುಡುಗ ರೇಗಿಸುತ್ತಾರೆ. ಈ ವೇಳೆ ರಾಜೀವ್ ಪೆರ್ಗುಡೆ.. ಪೂರಿ ಸಾಗೂ ಬೇಡ ಬೇರೆ ಏನಾದರೂ ಕೇಳು, ದಾವಣಗೆರೆ ಬೆಣ್ಣೆ ದೋಸೆ ಕೇಳು ಅಂತಾರೆ. ಅದಕ್ಕೆ ಶುಭಾ ಬೆಣ್ಣೆ ದೋಸೆ ಒಕೆ ಒಕೆ ಅಷ್ಟೇ ಎನ್ನುತ್ತಾರೆ. ಹೋಗ್ಲಿ ಪಡ್ಡು ಕೇಳು ಅಂದಾಗ, ಪಡ್ಡು ನನಗೆ ಅಷ್ಟು ಇಷ್ಟವಾಗುವುದಿಲ್ಲ. ಈ ಎಲ್ಲದಕ್ಕಿಂತ ಇಡ್ಲಿ, ವಡೆ ನೇ ಒಕೆ ಎಂದು ಶುಭಾ ಹೇಳುತ್ತಾರೆ.
Advertisement
ಒಟ್ಟಾರೆ ಮನೆಮಂದಿಯೆಲ್ಲಾ ಮನೆಯಲ್ಲಿದ್ದ ವಸ್ತುಗಳೆಲ್ಲ ಕಾಣೆಯಾಗಿರುವುದಕ್ಕೆ ಆತಂಕಗೊಂಡಿದ್ದರೆ ಶುಭಾಗೆ ಮಾತ್ರ ಪೂರಿ ಸಾಗೂ ಚಿಂತೆಯಾಗಿದೆ.