ಬಿಗ್ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳಿಸಲಾಗಿದೆ. ತನಗೆ ಕಳಪೆ ಪಟ್ಟ ಕೊಡಲು ಸ್ಪರ್ಧಿಗಳು ನೀಡಿದ ಕಾರಣ ಸರಿ ಇಲ್ಲ ಎಂದು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
Advertisement
ಬಿಗ್ಬಾಸ್ ಆಟದ ನಿಯಮದ ಪ್ರಕಾರ ಪ್ರತಿವಾರದ ಆಟ ಮತ್ತು ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಸ್ಪರ್ಧಿಗಳು ಒಮ್ಮತದಿಂದ ಒಬ್ಬರನ್ನು ಕಳಪೆ ಎಂದು ಸೂಚಿಸುತ್ತಾರೆ. ಅವರು ಬಿಗ್ಬಾಸ್ ಮುಂದಿನ ಆದೇಶದವರೆಗೆ ಜೈಲಿನಲ್ಲಿದ್ದು, ಶಿಕ್ಷೆಯನ್ನು ಅನುಭವಿಸಬೇಕು. ಸೆಕೆಂಡ್ ಇನ್ನಿಂಗ್ಸ್ನಲ್ಲಿ 2ನೇ ವಾರ ಕಳಪೆ ಪಟ್ಟಿಯನ್ನು ಹೊತ್ತು ಜೈಲು ಸೇರಿರುವ ಚಕ್ರವರ್ತಿ ಚಂದ್ರಚೂಡ್ ಬಿಗ್ಬಾಸ್ ಮನೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
Advertisement
Advertisement
ಚಕ್ರವರ್ತಿಯನ್ನು ಪ್ರಿಯಾಂಕಾ ತಿಮ್ಮೇಶ್, ಶಮಂತ್ ಬ್ರೊ ಗೌಡ, ಪ್ರಶಾಂತ್ ಸಂಬರ್ಗಿ, ಶುಭಾ ಪೂಂಜಾ ಸೇರಿ ಐವರು ಕಳಪೆ ಪಟ್ಟಕ್ಕೆ ನಾಮಿನೇಟ್ ಮಾಡಿದ್ದಾರೆ. ಮನನೊಂದಿರುವ ನಾನು ತರಕಾರಿ ಕಟ್ ಮಾಡೋದಿಲ್ಲ, ಸಾಂಬಾರ್ ಕಾಗೆ, ಜೊಳ್ಳು ಮಳ್ಳು, ಅವಕಾಶವಾದಿಗಳು, ಸುಬ್ಬಿ, ಒಟ್ಟಿಗೆ ಅನ್ನ ತಿಂದು ದ್ರೋಹ ಮಾಡಿದ ಸ್ನೇಹಿತರು ಎಂದು ಹೀಗೆ ಬರೆದು ಜೈಲಿನಲ್ಲೇ ಕುಳಿತುಕೊಂಡು ಟಿಶ್ಯು ಮೇಲೆ ಬರೆದು ಹಾಕಿದ್ದಾರೆ. ಇದೆಲ್ಲವನ್ನು ಹಾಡಿನ ರೂಪದಲ್ಲಿ ಹೇಳುತ್ತಾ ಜೈಲಿನೊಳಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಗೋಡೆ ಮೇಲೆ ಬಾವುಟ, ಪೋಸ್ಟರ್ ಕೂಡ ಅಂಟಿಸುತ್ತಾ ಅವರಿಗೆ ಬೇಸರ ಮಾಡಿದ ಸ್ಪರ್ಧಿಗಳ ಹೆಸರು ಕೂಡ ಬರೆದಿದ್ದಾರೆ.
Advertisement
ಚಕ್ರವರ್ತಿ ನಡವಳಿಕೆ ಬಗ್ಗೆ ಇತರ ಸ್ಪರ್ಧಿಗಳು ಚರ್ಚೆ ಮಾಡುತ್ತಿದ್ದಾರೆ. ಸ್ನೇಹಿತ ಸ್ನೇಹಿತರ ತರ ಇರಬೇಕು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಆತ್ಮೀಯರಾಗಿರುವವರು ಈ ರೀತಿ ಮಾಡಿದರೆ ಬೇಸರ ಆಗತ್ತೆ ಅಂತ ಶಮಂತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಕ್ರವರ್ತಿ ಅವರೇ ಇದನ್ನೆಲ್ಲ ನಿಲ್ಲಿಸಬೇಕು, ಬೇರೆ ಯಾರೂ ಏನೂ ಮಾಡೋಕೆ ಆಗದು ಮಂಜು ಪಾವಗಡ ಹೇಳಿದ್ದಾರೆ. ತರಕಾರಿಯನ್ನು ಅವರಿಗೆ ಕೋಡೋಣ ಮನಸ್ಸು ಬದಲಾಯಿಸಿ ಕಟ್ ಮಾಡಿದರು ಮಾಡಬಹುದು ಎಂದು ದಿವ್ಯಾ ಉರುಡುಗ ವೈಷ್ಣವಿಯ ಬಳಿ ಹೇಳಿದ್ದಾರೆ.
ಎಲ್ಲರೂ ಕಳಪೆಗಾಗಿ ಎಲ್ಲರೂ ಜೈಲಿಗೆ ಹೋಗಿದ್ದಾರೆ. ಆದರೆ ಯಾರು ಹೀಗೆ ಮಾಡಿಲ್ಲ. ಪ್ರಶಾಂತ್ ಸರ್ ತರಕಾರಿ ಕಟ್ ಮಾಡಲ್ಲ ಎಂದಾಗ ಎಲ್ಲರ ಮುಖದಲ್ಲಿ ಕೋಪ ಬಂತು. ಆದರೆ ಇವತ್ತು ಈ ವ್ಯಕ್ತಿಗೆ ಯಾರು ಏನು ಹೇಳಿಲ್ಲ. ಸರಿದೂಗಿಸಿಕೊಂಡು ಹೇಗೋ ಒಂದು ಸಾಂಬಾರ್ ಮಾಡಿದರು. ನನಗೆ ಈ ವಿಚಾರವಾಗಿ ಬೇಸರವಾಯಿತು. ಕಳಪೆಯಾಗಿ ಕಾಮಿಡಿ ಪೀಸ್ ಆಗಿ ಬಿಟ್ಟರು ಎಂದು ಪ್ರಿಯಾಂಕ ಶಮಂತ್ ಬಳಿ ಹೇಳಿದ್ದಾರೆ.
View this post on Instagram
ಬಿಗ್ಬಾಸ್ ಮನೆಯಲ್ಲಿ ಸಿಕ್ಕ ಕಪ್ಪು ಬಣ್ಣದ ಕವರ್ ಅನ್ನು ಜೈಲಿನ ಕಂಬಿಗೆ ಕಟ್ಟಿದ್ದಾರೆ. ಮನೆಯ ಸ್ಪರ್ಧಿಗಳ ವಿರುದ್ಧ ನಾನು ಪ್ರತಿಭಟನೆ ಮಾಡುತ್ತಿದ್ದೇನೆ. ಇದುವೇ ಪ್ರತಿಭಟನೆಯ ಬಾವುಟ. ನಿಜವಾದ ಕಳಪೆ, ದಲ್ಲಾಳಿಗಳ ವಿರುದ್ಧ ನನ್ನ ಪ್ರತಿಭಟನೆ. ಕಪ್ಪು ಬಾವುಟ ನನ್ನ ಹೋರಾಟದ ಪ್ರತೀಕ ಬ್ರೋ ಎಂದು ಅರವಿಂದ್ ಬಳಿ ಚಕ್ರವರ್ತಿ ಹೇಳಿದ್ದಾರೆ. ಆಗ ಅರವಿಂದ್ ಓಓ.. ಹೌದಾ ಎಂದು ನಕ್ಕು ಸುಮ್ಮನಾಗಿದ್ದಾರೆ.
View this post on Instagram
ಪ್ರತಿ ಬಾರಿ ಕಳಪೆ ನೀಡಿದಾಗಲೂ ಅದನ್ನು ಒಪ್ಪಿಕೊಂಡು ಸ್ಪರ್ಧಿಗಳು ಜೈಲಿಗೆ ಹೋಗಿದ್ದಾರೆ. ದಿವ್ಯಾ ಕೈಗೆ ಗಾಯ ಆಗೋಕೆ ನಾನೇ ಕಾರಣ. ಹೀಗಾಗಿ ನಾನೇ ಜೈಲಿಗೆ ಹೋಗುತ್ತೇನೆ ಎಂದು ಚಕ್ರವರ್ತಿ ಅವರೇ ಬಾಯ್ಬಿಟ್ಟು ಹೇಳಿದ್ದರು. ಈಗ ಕಳಪೆ ಎನ್ನುವ ಪಟ್ಟ ನೀಡಿದ ನಂತರದಲ್ಲಿ ಅವರ ವರಸೆಯನ್ನು ಬದಲಾಯಿಸಿದ್ದಾರೆ.