Bengaluru CityCinemaCoronaKarnatakaLatestMain PostSandalwood

ಬಿಗ್‍ಬಾಸ್‍ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಸ್ಪರ್ಧಿಗಳು..!

ಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ದೇಶ ಹಾಗೂ ರಾಜ್ಯದ ಜನ ಕಂಗೆಟ್ಟಿದ್ದು, ದಿನಕ್ಕೊಂದು ಹೊಸ ಸಮಸ್ಯೆಗಳು ತಲೆದೋರುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು 72 ದಿನಕ್ಕೆ ಮುಕ್ತಾಯಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ದಿನ ಹೊರ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನೇ ಅರಿಯದ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಉಂಟಾಗಿದೆ.

ಹೌದು. ಸ್ಪರ್ಧಿಗಳಿಗೆ ಶೋ ನಿಲ್ಲಿಸುವ ಮಾಹಿತಿಯನ್ನು ಬಿಗ್ ಬಾಸ್ ನೀಡಿದ್ದಾರೆ. ಮಾಧ್ಯಮದಲ್ಲಿ ಪ್ರಸಾರವಾದ ಕೊರೊನಾ ಮಾಹಿತಿ ಹಾಗೂ ಲಾಕ್ ಡೌನ್ ಹೇರಿರುವ ತುಣುಕನ್ನು ಬಿಗ್ ಬಾಸ್ ಮನೆಯ ಒಳಗಡೆ ಪ್ರಸಾರ ಮಾಡಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳಲ್ಲಿ ಅಚ್ಚರಿ ಜೊತೆ ದುಃಖದ ಕಟ್ಟೆಯೊಡೆದಿದೆ.

ಇದರ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಗ್ ಬಾಸ್ ಶೋ ಮುಗಿಯುತ್ತಿದೆ ಎಂಬುದನ್ನು ಸ್ಪರ್ಧಿಗಳ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವುದನ್ನು ನಾವು ಗಮನಿಸಬಹುದಾಗಿದೆ. ಈ ವೇಳೆ ಚಕ್ರವರ್ತಿ, ವ್ಯವಸ್ಥೆಯಲ್ಲಿ ದೊಡ್ಡ ಪ್ರಾಬ್ಲಂ ಆಗಿದೆ. ಇದಕ್ಕೆ ವ್ಯವಸ್ಥೆಯೇ ಕಾರಣ ಅಂತ ಹೇಳಿಲ್ವಾ ಎಂದು ಹೇಳಿದ್ದಾರೆ. ಕೆಲವರು ಸಖತ್ ಭಯ ಆಗ್ತಿದೆ ಎಂದು ಕಣ್ಣೀರು ಹಾಕಿದರೆ, ಇನ್ನೂ ಕೆಲವರು ಈವಾಗ ಗೊತ್ತಾಗ್ತಾ ಇದೆ, ಪ್ರಾಪರ್ಟಿಯನ್ನ ಯಾಕೆ ಮುಟ್ಟಬೇಡಿ ಅಂತ ಹೇಳ್ತಾ ಇದ್ದರು ಅಂತ. ಆದರೆ ಈ ಮನೆಯನ್ನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಘು ಜೊತೆ ಶಮಂತ್ ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಕಳೆದ ಭಾನುವಾರವೇ ಶೋ ಮುಗಿದಿದೆ. ಆದರೆ ವಿದಾಯದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಸ್ಪರ್ಧಿಗಳೆಲ್ಲ ಕಣ್ಮಣಿ ಜೊತೆಗೆ ಚರ್ಚೆ ಮಾಡುತ್ತಾ ಸಂತೋಷದಿಂದಲೇ ಸಮಯ ಕಳೆದಿದ್ದಾರೆ. ಇಂದು ಮತ್ತು ನಾಳೆ ರಾತ್ರಿ 7.30 ಕೊನೆಯ ಕ್ಷಣಗಳ ಸಂಚಿಕೆಗಳು ಪ್ರಸಾರವಾಗಲಿವೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪ್ರಶಾಂತ್ ಸಂಬರಗಿ ಅವರು, ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡ್ತಿದ್ದೀರಾ, ಬಿಗ್ ಬಾಸ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಹೇಳಿದ್ದಾರೆ.

Leave a Reply

Your email address will not be published.

Back to top button