ಕಾಬೂಲ್: ಬಿಗಿ ಬಟ್ಟೆಯನ್ನು ಯುವತಿ ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯ ಬಲ್ಕನ್ನಲ್ಲಿ ನಡೆದಿದೆ.
ನಜಾನಿನ್ (21) ಮೃತಳಾಗಿದ್ದಾಳೆ. ಸಮರ್ ಕ್ವಾಂಡ್ ಎಂಬ ಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದ್ದು, ಈ ಹಳ್ಳಿ ಸಂಪೂರ್ಣವಾಗಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
Advertisement
Advertisement
ನಜಾನಿನ್ ಮಸೀದಿಗೆ ತೆರಳಲು ವಾಹನ ಹುಡುಕುತ್ತ ಬಂದಾಗ ದಾಳಿ ನಡೆದಿದೆ. ಬಿಗಿಯಾಗಿ ಉಡುಪು ಧರಿಸಿದ್ದಳು ಮತ್ತು ಆಕೆಯೊಂದಿಗೆ ಪುರುಷರು ಯಾರೂ ಇರಲಿಲ್ಲ ಎಂಬ ಕಾರಣಕ್ಕೆ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಈಕೆಯ ಮೇಲೆ ದಾಳಿಯಾಗುವಾಗ ಅವಳು ಮುಖ ಹಾಗೂ ಮೈಯಿಗೆ ಬುರ್ಖಾವನ್ನು ಹೊದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಳ್ಳಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿ ಇದ್ದರೂ, ಆಕೆಯನ್ನು ಹತ್ಯೆ ಮಾಡಿದ್ದು ತಾವಲ್ಲ ಎಂದು ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.
Advertisement
Advertisement
ಅಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಎಲ್ಲ ಗಣ್ಯವ್ಯಕ್ತಿಗಳನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.