ಚಿಕ್ಕಮಗಳೂರು: ನಗರದ ಬೇಲ್ಟ್ ರಸ್ತೆಯ ಶಂಕರಪುರದಲ್ಲಿರುವ ಬಿ.ಎಸ್.ಎನ್.ಎಲ್ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸಂಜೆ ಮರದ ಎಲೆಗಳಿಗೆ ಬೆಂಕಿ ಕೊಡಲಾಗಿತ್ತು. ಬೆಂಕಿಯ ಕಿಡಿ ಗಾಳಿಗೆ ಹಾರಿ ಬೆಂಕಿ ಹೊತ್ತಿಕೊಳ್ತೋ ಅಥವಾ ಇನ್ಯಾವ ಕಾರಣಕ್ಕೆ ಅಗ್ನಿ ಅವಘಡ ಸಂಭವಿಸಿತೋ ಗೊತ್ತಿಲ್ಲ. ಆದರೆ ಸಂಜೆ 8 ಗಂಟೆ ಸುಮಾರಿಗೆ ಕಚೇರಿಯೇ ಹೊತ್ತಿ ಉರಿಯುವ ಹಂತಕ್ಕೆ ತಲುಪಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಅಗ್ನಿ ಶಾಮಕ ಇಲಾಖೆಯ ನೆರವಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಬಿ.ಎಸ್.ಎನ್.ಎಲ್ ಕಚೇರಿಯಲ್ಲಿದ್ದ ಕೇಬಲ್ ವೈರ್ ಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಕಚೇರಿಯೊಳಗೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿತ್ತು. ಸಾರ್ವಜನಿಕರು ಕೂಡ ಒಂದು ಕ್ಷಣ ಆತಂಕಕ್ಕೀಡಾಗಿದ್ದಾರು. ಆದರೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
Advertisement
ಕಚೇರಿ ಹೊರಭಾಗವಿದ್ದ ಕೇಬಲ್ ಗಳು ಬೆಂಕಿಯ ಕೆನ್ನಾಲಿಗೆಗೆ ಸಿಡಿಯುತ್ತಿದ್ದ ಶಬ್ಧ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.