ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ತೆಗೆದುಕೊಂಡ ಕಾರ್ಯಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಬಿಇಎಲ್ ನ ಲಸಿಕಾ ಕೇಂದ್ರಕ್ಕೆ ಇವತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ ನೀಡಿದ್ರು. ಸುವ್ಯವಸ್ಥಿತವಾಗಿ ನಡೆಯುತ್ತಿರೋ, ಕೋವಿಡ್ ಲಸಿಕಾ ಕೇಂದ್ರವನ್ನು ಕಂಡು ಅತ್ಯಂತ ಸಂತಸ ವ್ಯಕ್ತಪಡಿಸಿದ್ರು. ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ಕೈಗೊಂಡ ಕೋವಿಡ್ ಕೇರ್ ಸೆಂಟರ್, ಕೋವಿಡ್ ಟಾಸ್ಕ್ ಫೋರ್ಸ್ ಟೀಮ್ ರಚನೆ ಸೇರಿದಂತೆ ಹಲವು ಕಾರ್ಯವೈಖರಿಯ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದರು.
Advertisement
Advertisement
ಸಂಸ್ಥೆಯು ನೌಕರರ ಕೊರೊನಾ ಚಿಕಿತ್ಸೆಗೆ ನೀಡುತ್ತಿರೋ ಆರ್ಥಿಕ ಸಹಾಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭೇಟಿಯ ಸವಿನೆನಪಿಗಾಗಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ಅಗತ್ಯವಾದ ಲಸಿಕೆಗಳನ್ನು ಬಿಇಎಲ್ ಗೆ ಸರಬರಾಜು ಮಾಡಲು ಸಂಬಂಧಪಟ್ಟವರಿಗೆ ಆದೇಶಿಸಲಾಗುವುದೆಂಬ ಆಶ್ವಾಸನೆ ನೀಡಿದರು.
Advertisement
ಕೊರೊನಾ ಸಂಕಷ್ಟದ ಸಮಯದಲ್ಲಿ ತನ್ನ ನೌಕರರಿಗೆ ಬಿಇಎಲ್ ಬೆನ್ನುಲುಬಾಗಿ ನಿಂತಿದೆ. ನಗರದ ಜಾಲಹಳ್ಳಿಯಲ್ಲಿರೋ ಬಿಇಎಲ್ ಸಂಸ್ಥೆಯು ಕೊರೊನಾ ಲಾಕ್ಡೌನ್ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸುಮಾರು 10,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನೌಕರರನ್ನು ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಅಥವಾ ಆದ್ಯತಾ ಗುಂಪಿನಲ್ಲಿ ಸೇರಿಸಲಾಗಿದ್ದು, ಬಿಇಎಲ್ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ.
ಈ ವೇಳೆ ಬಿಇಎಲ್ ಡೈರೆಕ್ಟರ್ ವಿನಯ್ ಕುಮಾರ್ ಕಟಿಯಾಲ್, ಬಿಇಎಲ್ ನ ಜನರಲ್ ಮ್ಯಾನೇಜರ್ ಆರ್ ಪಿ ಮೋಹನ್, ಎಜಿಎಂ ಸುರೇಶ್ ಮೈಚಿಲ್ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಭಾಗದ ಡಿಜಿಎಂ ಗುರುರಾಜ್ ಎಂ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರಿನಲ್ಲಿರುವ ಬಿಇಎಲ್ ಆವರಣದಲ್ಲಿ ಇಂದು ಸಸಿಗಳನ್ನು ನೆಡಲಾಯಿತು. ಬಿಇಎಲ್ ತನ್ನ ಕ್ಯಾಂಪಸ್ಸಿನಲ್ಲಿ ಸಾಕಷ್ಟು ಗಿಡಮರಗಳನ್ನು ಬೆಳೆಸಿದೆ.
ಸುತ್ತಮುತ್ತಲಿನ ಪರಿಸರ ರಕ್ಷಣೆಗೂ ಕಾಳಜಿ ತೋರಿದೆ. ಸಮೀಪದ ದೊಡ್ಡಬೊಮ್ಮಸಂದ್ರ ಕೆರೆ ಆವರಣದಲ್ಲಿ STP ಘಟಕ ಸ್ಥಾಪಿಸಿ ಕೆರೆನೀರು ಶುದ್ಧಗೊಳಿಸುತ್ತಿದೆ.#ಹಸಿರಿದ್ದಲ್ಲಿ_ಮೊಸರಿದೆ #ಹಸಿರೇ_ಉಸಿರು pic.twitter.com/kc26YzRefZ
— Sadananda Gowda (@DVSadanandGowda) June 12, 2021