ಚಿಕ್ಕೋಡಿ: ಹಣ, ಬಂಗಾರ ಸೇರಿದಂತೆ ವಿವಿಧ ವಸ್ತುಗಳು ಕಳೆದುಕೊಂಡರೆ ಅಥವಾ ಕಳ್ಳತನವಾದರೇ ಜನರು ನಮ್ಮ ಅಮೂಲ್ಯ ವಸ್ತುಗಳನ್ನ ಹುಡುಕಿಕೊಡಿ ಎಂದು ಪೊಲೀಸರಲ್ಲಿ ದೂರು ಸಲ್ಲಿಸುವದು ಸಾಮಾನ್ಯ. ಆದರೆ ಇಲ್ಲೊಂದು ರೈತ ಕುಟುಂಬ ನಮ್ಮ ಜಮೀನಿನಲ್ಲಿನ ಬಾವಿ ಕಳೆದು ಹೋಗಿದೆ ಹುಡುಕಿಕೊಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಬಾವಿ ಕಳೆದು ಹೋಗಿದೆ ಎಂದು ಗ್ರಾಮದ ರೈತ ಮಲ್ಲಪ್ಪ ಕುಲಗೋಡೆ ದೂರು ನೀಡಿದ್ದಾರೆ. ಜಮೀನಿನಲ್ಲಿ ಬಾವಿ ತೋಡದೆ ರಾಯಬಾಗ ತಾಲೂಕಿನ ಬೆಂಡಿವಾಡ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಕಲಿ ಬಿಲ್ ತೆಗೆದಿದ್ದಾರೆ. ಇದರಿಂದ ಮಾಹಿತಿ ತಿಳಿದ ರೈತ ಫೇಕ್ ಬಿಲ್ ಹಚ್ಚಿ ತೆಗೆದಿರುವ ಬಾವಿಯನ್ನ ಹುಡುಕಿಕೊಡುವಂತೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
Advertisement
Advertisement
ರೈತ ಮಲ್ಲಪ್ಪ ಕುಲಗುಡೆ ಗದ್ದೆಯ ಸರ್ವೆ ನಂಬರ್ 21/1 ರಲ್ಲಿ 77 ಸಾವಿರ ರೂ. ಖರ್ಚಿನಲ್ಲಿ ಬಾವಿ ತೋಡಿದ್ದಾಗಿ ಮಹಾತ್ಮಾ ಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಕಾರ್ಮಿಕರ ಹೆಸರಿನಲ್ಲಿ ಹಣ ಪೀಕಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೇ 40 ವರ್ಷದ ಹಿಂದೆಯೇ ಈ ಜಮೀನಿನಲ್ಲಿ ಬಾಸವಿ ತೋಡಲಾಗಿತ್ತು. ಆದರೆ ಈಗ ಮನರೇಗಾ ಯೋಜನೆಯಲ್ಲಿ ಎಪ್ರಿಲ್ 30 ರಂದು ಹೊಸ ಕಾಮಗಾರಿ ಎಂದು ಕೈಗೆತ್ತಿಕೊಂಡು ಮೇ 13 ರ ವರೆಗೆ ಕಾಮಗಾರಿ ನಡೆಸಲಾಗಿದೆ ಎಂದು ಬಿಲ್ ತೆಗೆಯಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನಟ ದುನಿಯಾ ವಿಜಯ್ ತಾಯಿ ಆರೋಗ್ಯ ಗಂಭೀರ
Advertisement
Advertisement
ನಕಲಿ ಬಿಲ್ ತೆಗೆದು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕೆಲವು ಮಧ್ಯವರ್ತಿಗಳು ಹಣವನ್ನ ಲೂಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇಲ್ಲಿನ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನ ಕೇಳಿದರೇ ನಾನು ಈ ಪಂಚಾಯತಿಗೆ ಬಂದು ಸ್ವಲ್ಪ ದಿನಗಳಾದವು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಅಂತಾರೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ಹೋದ ಮಲ್ಲಪ್ಪ ಕುಲಗುಡೆ ಎಂಬ ರೈತ ಈಗ ಸದ್ಯ ತನ್ನ ಜಮೀನಿನಲ್ಲಿ ನಕಲಿಯಾಗಿ ನಿರ್ಮಿಸಿರುವ ಕಳೆದು ಹೋದ ಬಾವಿ ಹುಡುಕಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ ಎನ್ನುವುದೇ ರೈತರ ಆಗ್ರಹವಾಗಿದೆ. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ