– ನಾಲ್ವರು ದಾರುಣ ಸಾವು
– ಭರದಿಂದ ಸಾಗಿದೆ ರಕ್ಷಣಾ ಕಾರ್ಯ
ಭೋಪಾಲ್: ಆಟವಾಡುತ್ತಾ ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಮಾಡುವುದನ್ನು ನೋಡಲು ಹೋಗಿ 30 ಮಂದಿ ಅದೇ ಬಾವಿಗೆ ಬಿದ್ದು, ಅದರಲ್ಲಿ 4 ಮಂದಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಗುರುವಾರ ಸಂಜೆ ವಿದಿಶಾ ಜಿಲ್ಲೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಜ್ ಬಸೋಡಾದಲ್ಲಿ ಈ ಘಟನೆ ನಡೆದಿದೆ. 50 ಅಡಿ ಆಳವಿರುವ ಬಾವಿಯಲ್ಲಿ 20 ಅಡಿಯಷ್ಟು ನೀರು ತುಂಬಿತ್ತು.
Advertisement
Madhya Pradesh: At least 15 people fall into a well in Ganjbasoda area in Vidisha
"Teams of NDRF & SDRF have left for the incident site from Bhopal. District collector & SP are on the spot. I've directed guardian minister Vishwas Sarang to reach there," says CM SS Chouhan pic.twitter.com/py2luXsvxN
— ANI (@ANI) July 15, 2021
Advertisement
ಘಟನೆಯಲ್ಲಿ ಬಾವಿಗೆ ಬಿದ್ದ 30 ಮಂದಿಯಲ್ಲಿ 15 ಮಂದಿಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಹಾಗೆಯೇ ನಾಲ್ವರ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಇನ್ನೂ 13 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳೀಗೆ ಮಾಹಿತಿ ನೀಡಿದ್ದಾರೆ.
Advertisement
Madhya Pradesh: Two persons have lost their lives after falling into a well in Ganjbasoda area in Vidisha
"I pay homage to those who lost their lives in the accident. Rescue work is underway," tweeted MP Chief Minister Shivraj Singh Chouhan pic.twitter.com/oONYJQ6UiW
— ANI (@ANI) July 15, 2021
Advertisement
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದಿಶಾ ಗಾರ್ಡಿಯನ್ ಮಿನಿಸ್ಟರ್ ಗುರುವಾರ ರಾತ್ರಿಯೇ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇಂದು ಕೂಡ ರಕ್ಷಣಾ ಕಾರ್ಯ ಮುಂದುವರಿದ್ದು, ಒಟ್ಟು 19 ಮಂದಿಯನ್ನು ರಕ್ಷಿಸಲಾಗಿದೆ. ಇಂದು ಮೂವರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ.
Madhya Pradesh: Latest visuals from Ganjbasoda area in Vidisha where at least 15 people fell into a well last night. NDRF, police, and administration are undertaking the rescue operation.
State Minister Vishwas Sarang was also present at the spot. pic.twitter.com/n72K80rEZC
— ANI (@ANI) July 15, 2021
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಬಾಲಕಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಇತ್ತ ಬಾವಿ ಹತ್ತಿರ ಸ್ಥಳೀಯರು ನೋಡುತ್ತಾ ನಿಂತಿದ್ದರು. ಇದೇ ವೇಳೆ ಮಣ್ಣು ಕುಸಿದು ನಿಂತಿದ್ದವರು ಕೂಡ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇತ್ತ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಶಿವರಾಜ್ ದಿಂಗ್ ಚೌಹಾಣ್ ತಿಳಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಆಗಾಗ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
#UPDATE | Madhya Pradesh: One more body recovered from the site in Ganjbasoda area of Vidisha, taking the death toll to 4 so far.
As per state minister Vishvas Sarang, 19 people have been rescued till now from the spot where they fell into a well last night.
— ANI (@ANI) July 16, 2021