– 100ರ ಬದಲು 60 ಬಿಟ್ ಕಾಯಿನ್ ನೀಡುವಂತೆ ಒತ್ತಡ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಕಂಪ್ಲೈಂಟ್ ಕೊಟ್ಟಿದ್ದಕ್ಕೆ ಕಿಡ್ನಾಪರ್ಸ್ ಗರಂ ಆಗಿದ್ದಾರೆ.
Advertisement
ಬಾಲಕನ ಕಿಡ್ನಾಪ್ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರ ಅಪಹರಣಕಾರರಿಗೆ ಗೊತ್ತಾಗಿದ್ದು, ಇದೀಗ ಬಾಲಕನ ತಂದೆಗೆ ಮೆಸೇಜ್ ಮಾಡಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನಿಡಿದ್ದಕ್ಕೆ ಕಿಡ್ನಾಪರ್ಸ್ ಗರಂ ಆಗಿದ್ದಾರೆ.
Advertisement
ಸದ್ಯ ಕಿಡ್ನಾಪರ್ಸ್ ಹಾಸನ ಭಾಗದ ನೆಟ್ ವರ್ಕ್ ಲೊಕೇಶನ್ ನಲ್ಲಿದ್ದಾರೆ. ಬಾಲಕ ಅನುಭವ್ ತಂದೆ ಬಿಜೋಯ್ ಗೆ ಮೆಸೇಜ್ ಮಾಡಿದ್ದಾರೆ. ಇದರಲ್ಲಿ 60 ಬಿಟ್ ಕಾಯಿನ್ ನೀಡಲು ಒತ್ತಡ ಹೇರುತ್ತಿದ್ದಾರೆ. ನಿನ್ನೆ 100 ಬಿಟ್ ಕಾಯಿನ್ ಗೆ ಬೇಡಿಕೆ ಇಟ್ಟಿದ್ದು, ಇದೀಗ 60 ಬಿಟ್ ಕಾಯಿನ್ ನೀಡುವಂತೆ ತಿಳಿಸಿದ್ದಾರೆ. 60 ಬಿಟ್ ಕಾಯಿನ್ ಮೌಲ್ಯ 10 ಕೋಟಿ ರೂಪಾಯಿ ಆಗಿರುತ್ತದೆ.
Advertisement
Advertisement
ಸಾರ್ವಜನಿಕರ ಎದುರೇ ದುಷ್ಕರ್ಮಿಗಳು ಉಜಿರೆಯಿಂದ ಬಿಳಿ ಬಣ್ಣದ ಹಾಗೂ ಯಲ್ಲೋ ಬೋರ್ಡ್ ಇದ್ದ ಇಂಡಿಕಾ ಕಾರಿನಲ್ಲಿ ನಿನ್ನೆ ನಿನ್ನೆ ಸಂಜೆ 6.30ರ ಸುಮಾರಿಗೆ ಕಿಡ್ನಾಪ್ ಮಾಡಿದ್ದಾರೆ. ಕಾರು ಉಜಿರೆಯಿಂದ ಚಾರ್ಮಾಡಿ ಕಡೆ ಹೋಗಿತ್ತು. ಕಿಡ್ನಾಪ್ ಬಳಿಕ ಬಾಲಕನ ತಂದೆ ಬಿಜೋಯ್ ಗೆ ಕರೆ ಮಾಡಿದ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದಾನೆ. ಬಾಲಕನ ತಂದೆಯ ಹಣಕಾಸು ವ್ಯವಹಾರ ಸಂಬಂಧ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಯಾರದ್ದೋ ಜೊತೆಗಿನ ವ್ಯವಹಾರದ ಹಿನ್ನೆಲೆಯಲ್ಲಿ ಪೂರ್ವಯೋಜಿತ ಅಪಹರಣ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು, ಸದ್ಯ ಚಾರ್ಮಾಡಿ ದಾಟಿ ಕಾರು ಸಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಕಾರಿನ ಬಗ್ಗೆ ಮಾಹಿತಿ ಕೊಡಲು ಸ್ಥಳೀಯರು ಕೋರಿಕೊಂಡಿದ್ದು, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.