Advertisements

ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್ – ಅರ್ಧ ಕಿ.ಮೀ ಕಾರ್ ಚಲಾಯಿಸಿದ

ನಾಗಪುರ: ಕಾರ್ ನಿಲ್ಲಿಸಲು ಹೇಳಿದ ಟ್ರಾಫಿಕ್ ಪೊಲೀಸ್ ಮೇಲೆ ವಾಹನ ಚಲಾಯಿಸಿರುವ ಘಟನೆ ನಾಗಪುರದಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಬಾನೆಟ್ ಮೇಲೆ ಹತ್ತಿದ್ರೂ ಚಾಲಕ ಕಾರ್ ನಿಲ್ಲಿಸಿಲ್ಲ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisements

ಬಾನೆಟ್ ಮೇಲೆ ಹತ್ತಿದ್ದ ಪೊಲೀಸ್ ಅಧಿಕಾರಿಯನ್ನ ಕೆಳಗೆ ಬೀಳಿಸಲು ಚಾಲಕ ಕಾರ್ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ಗ ದ್ವಿಚಕ್ರ ವಾಹನಗಳಿಗೂ ಡಿಕ್ಕಿ ಹೊಡೆದಿದ್ದಾನೆ. ಸುಮಾರು ಅರ್ಧ ಕಿಲೋಮೀಟರ್ ದೂರಕ್ಕೆ ಹೋದ ನಂತರ ಚಾಲಕ ಕಾರ್ ವೇಗ ಕಡಿಮೆ ಮಾಡಿದ್ದಾನೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ- ಕಾರು ತಡೆದ ಪೊಲೀಸರನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

Advertisements

ಕಾರ್ ನಿಲ್ಲಿಸಿದ ಬಳಿಕ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿ ಕಂಬಿ ಹಿಂದೆ ತಳ್ಳಲಾಗಿದೆ. ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆ ದೆಹಲಿ-ಗ್ರೇಟರ್ ನೊಯ್ಡಾ ರಸ್ತೆಯಲ್ಲಿ ನಡೆದಿತ್ತು. ಬೆಂಗಳೂರಿನ ಯಲಹಂಕ ಬಳಿಯಲ್ಲಿ ಓರ್ವ ಪುಂಡ ಚಾಲಕ ಕಾರ್ ತಡೆಯಲು ಮುಂದಾದ ವ್ಯಕ್ತಿ ಬಾನೆಟ್ ಮೇಲೆ ಹತ್ತಿದ್ರೂ ಚಲಾಯಿಸಿದ್ದನು. ಇದನ್ನೂ ಓದಿ: ಮಹಿಳೆಗೆ ಗುದ್ದಿ, ಬಾನೆಟ್ ಮೇಲೆ ಹತ್ತಿದ ವ್ಯಕ್ತಿಯನ್ನು ಎಳೆದೊಯ್ದ ಕಾರು ಚಾಲಕ

Advertisements
Exit mobile version