Bengaluru CityKarnatakaLatestMain Post

ಬಾದಾಮಿಯಲ್ಲೇ ಸ್ಪರ್ಧೆ ಮಾಡ್ಬೇಕು – ಸಿದ್ದರಾಮಯ್ಯ ನಿವಾಸಕ್ಕೆ 500ಕ್ಕೂ ಹೆಚ್ಚು ಜನರ ಆಗಮನ

– 60 ಕ್ರೂಸರ್ ಗಳಲ್ಲಿ ಆಗಮಿಸಿದ ಬಾದಾಮಿ ಕ್ಷೇತ್ರದ ಜನರು
– ಬೆಂಬಲಿಗರಿಂದ ಬಾದಾಮಿ ಹುಲಿ ಅಂತೇಳಿ ಜೈಕಾರ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಕ್ಷೇತ್ರ ಬದಲಿಸದಂತೆ ಸಿದ್ದರಾಮಯ್ಯನವರ ಮೇಲೆ ಒತ್ತಡ ತರಲು ಬಾದಾಮಿಯಿಂದ ಸುಮಾರು 500ಕ್ಕೂ ಹೆಚ್ಚು ಜನರು 60 ಕ್ರೂಸರ್ ಗಳಲ್ಲಿ ಬೆಂಗಳೂರಿಗೆ ಅಗಮಿಸಿದ್ದಾರೆ. ಬಾದಾಮಿ ಕ್ಷೇತ್ರದ ಪ್ರತಿ ಗ್ರಾಮದ ಇಬ್ಬರಂತೆ ಸಿದ್ದರಾಮಯ್ಯನವರ ಭೇಟಿಗೆ ಬಂದಿದ್ದಾರೆ.

ಶಾಸಕರಾದ ಜಮೀರ್ ಅಹಮ್ಮದ್ ಖಾನ್ ತಮ್ಮ ಕ್ಷೇತ್ರ ಚಾಮರಾಜಪೇಟೆಗೆ ಬನ್ನಿ ಎಂದು ಸಿದ್ದರಾಮಯ್ಯನವರಿಗೆ ಆಹ್ವಾನ ನೀಡುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡುವಂತೆ ಹೇಳಿರೋದು ಜಮೀರ್ ಅವರ ವೈಯಕ್ತಿಕ ವಿಚಾರ. ಆದರೆ ಸಿದ್ದರಾಮಯ್ಯ ಯಾವ ಕಾರಣಕ್ಕೂ ಚಾಮರಾಜಪೇಟೆಗೆ ಹೋಗಬಾರದು, ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿ ಆಗಬೇಕು. ಅವರು ಸಿಎಂ ಆಗೋ ಅವಕಾಶ ಇದೆ. ಹಾಗಾಗಿ ಬಾದಾಮಿಯಿಂದಲೆ ಸ್ಪರ್ಧೆ ಮಾಡಿ ಅವರು ಸಿಎಂ ಆಗಬೇಕು. ಯಾವ ಕಾರಣಕ್ಕೂ ಅವರು ಬೇರೆ ಕಡೆ ಹೋಗಬಾರದು. ಅವರು ಒಪ್ಪಿಕೊಳ್ಳದಿದ್ದರೆ ಇಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಬೆಂಬಲಿಗರು ಹೇಳಿದ್ದಾರೆ. ಇದನ್ನೂ ಓದಿ: ನಾನು ಓಪನ್ ಹಾರ್ಟೆಡ್, ಸಿದ್ದರಾಮಯ್ಯ ಮಾತನಾಡಬೇಡ ಎಂದಿದ್ದಾರೆ: ಜಮೀರ್

ಮಾಜಿ ಸಿಎಂ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾದಾಮಿ ಹುಲಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋದು ಜಮೀರ್ ವ್ಯಯಕ್ತಿಕ ಅಭಿಪ್ರಾಯ: ಜಿ.ಪರಮೇಶ್ವರ್

Leave a Reply

Your email address will not be published. Required fields are marked *

Back to top button