– ಮನೆಯಲ್ಲಿ ಬಾಲಕಿ ಇದ್ರೂ, ಸಿನಿಮಾ ರೀತಿಯಲ್ಲಿ ಕಳ್ಳತನ
ಮೈಸೂರು: ನಗರದಲ್ಲಿ ಕಳ್ಳರ ಕೈಚಳಕ ಮುಂದುವರಿದಿದ್ದು, ಮನೆಯಲ್ಲಿದ್ದ ಎರಡು ಕೆ.ಜಿ ಚಿನ್ನ ಕಳ್ಳತನ ಮಾಡಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಸರಸ್ವತಿಪುರಂನಲ್ಲಿರುವ 5ನೇ ಮುಖ್ಯ ರಸ್ತೆಯಲ್ಲಿ ವಿಜಿ ಕುಮಾರ್ ಮತ್ತು ವನಜಾಕ್ಷಿ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ವಿಜಿಕುಮಾರ್ ಬ್ಯುಸಿನೆಸ್ ಮೆನ್ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್ ವಿಭಾಗದಲ್ಲಿ ದಫೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮನೆಯ ಯಾವುದೇ ಕಿಟಕಿ ಬಾಗಿಲು ಮುರಿಯದೇ ಚಿನ್ನವನ್ನು ಕಳ್ಳರು ಕಳವು ಮಾಡಿದ್ದಾರೆ.
Advertisement
Advertisement
ವಿಜಿಕುಮಾರ್ ಅವರಿಗೆ ಆಗಸ್ಟ್ 17ರಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರ ತಾಯಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ನಿನ್ನೆ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ 2 ಕೆಜಿಯಷ್ಟು ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಮನೆಯ ನಕಲಿ ಕೀ ಬಳಕೆಯಾಗಿಲ್ಲ, ಬಾಗಿಲನ್ನು ಮುರಿದಿಲ್ಲ, ಆದರೂ ಕಳ್ಳತನ ನಡೆದಿದೆ.
Advertisement
Advertisement
ಮನೆಯಲ್ಲಿ ಬಾಲಕಿ ಇದ್ರೂ ಸಿನಿಮಾ ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ. ಬ್ಯಾಂಕ್ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಬ್ಯಾಂಕ್ನಲ್ಲಿದ್ದ ಚಿನ್ನವನ್ನು ಮನೆಗೆ ತಂದಿದ್ದೆವು. ಜೊತೆಗೆ ನಮ್ಮ ಮಾವನ ಮನೆ ರಿಪೇರಿ ಹಿನ್ನೆಲೆ ಅವರ ಅರ್ಧ ಕೆ.ಜಿ. ಚಿನ್ನ ಕೂಡ ನಮ್ಮ ಮನೆಯಲ್ಲಿಟ್ಟಿದ್ದರು. ನನಗೆ ಕೊರೊನಾ ಪಾಸಿಟಿವ್ ಬಂತು, ನಾನು ಸರಿಯಾಗುವಷ್ಟರಲ್ಲೆ ನಮ್ಮ ತಾಯಿ ಕೂಡ ಪಾಸಿಟಿವ್ ಆದ್ರು. ಈ ಗೊಂದಲದಿಂದ ನಾನು ಚಿನ್ನವನ್ನು ಬ್ಯಾಂಕ್ನಲ್ಲಿ ಇಡಲು ಸಾಧ್ಯವಾಗಲಿಲ್ಲ ಎಂದು ಮಾಲೀಕರು ಹೇಳಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕಳ್ಳತನ ಹೇಗೆ ಆಯ್ತು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ.