– ಏಕಕಾಲದಲ್ಲಿ 10 ಸಿನಿಮಾ ನಿರ್ಮಾಣ ಮಾಡೋದಾಗಿ ಘೋಷಿಸಿದ್ದ ಬ್ರದರ್ಸ್
ಧಾರವಾಡ: ಬಹುಕೋಟಿ ವಂಚನೆ ಪ್ರಕಣದಲ್ಲಿ ಜೈಲು ಸೇರಿದ್ದ ಧಾರವಾಡದ ಖಾಸನೀಸ್ ಸೋದರರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ.
ನಾಲ್ಕು ವರ್ಷದ ಜೈಲುವಾಸದ ಬಳಿಕ ಜಾಮೀನು ಮಂಜೂರಾಗಿದ್ದು, ಸತ್ಯಬೋಧ ಅಲಿಯಾಸ್ ಹರ್ಷ ಖಾಸನೀಸ್, ಸಂಜೀವ್ ಮತ್ತು ಶ್ರೀಕಾಂತ್ ಜಾಮೀನು ಪಡೆದ ಸೋದರರು. ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇವರಿಗೆ ಜಾಮೀನು ನೀಡಿ ಆದೇಶ ಮಾಡಿದೆ.
Advertisement
ಮೂಲತಃ ಕಲಘಟಗಿ ಪಟ್ಟಣದವರಾಗಿರುವ ಈ ಮೂವರು ಸೋದರರು, ಹರ್ಷ ಎಂಟರ್ ಟೈನಮೆಂಟ್ ಹೆಸರಿನಲ್ಲಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಜನರಿಗೆ ಬಹುಕೋಟಿ ವಂಚನೆ ಮಾಡಿದ್ದರು. ಕಳೆದ 2017ರಲ್ಲಿ ಬಂಧನಕ್ಕೊಳಗಾಗಿದ್ದ ಇವರು, ಜನರಿಂದ ಹಣ ಪಡೆದು, ಏಕಕಾಲಕ್ಕೆ ಹತ್ತು ಸಿನಿಮಾ ನಿರ್ಮಾಣ ಘೋಷಿಸಿ ಸುದ್ದಿಯಾಗಿದ್ದರು. ವಂಚನೆ ಬಳಿಕ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ನಾಪತ್ತೆಯಾಗಿದ್ದ ಇವರ ಈ ಬಹುಕೋಟಿ ವಂಚನೆ ಪ್ರಕರಣವನ್ನ ಸರ್ಕಾರ ಸಿಐಡಿಗೆ ವಹಿಸಿತ್ತು.
Advertisement