ವಿಜಯಪುರ: ಬಸ್ ದರ ಹೆಚ್ಚಳ ಇಲ್ಲವೇ ಇಲ್ಲ. ದರ ಹೆಚ್ಚಳದ ಪ್ರಸ್ತಾವನೆ ಇಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಲ್ಲಿ ಜನರು ತೊಂದರೆಯ ಲ್ಲಿದ್ದಾರೆ. ಕಳೆದ ವರ್ಷವೇ ಹೆಚ್ಚಳ ಮಾಡಲಾಗಿದೆ. ಈಗ ದರ ಹೆಚ್ಚಳ ಮಾಡೋದಿಲ್ಲ. ಒಟ್ಟಿನಲ್ಲಿ ದರ ಹೆಚ್ಚಳದ ಪ್ರಸ್ತಾವನೆ ಕೂಡ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Advertisement
Advertisement
ಗಾಣಿಗ ಸಮಾಜದ ಮೀಸಲಾತಿ ಹೋರಾಟದ ಬಗ್ಗೆ ಯಾವುದೆ ಚರ್ಚೆ ನಡೆದಿಲ್ಲ. ಅದರ ಬಗ್ಗೆ ಯೋಚನೆಯೂ ಇಲ್ಲ. ನಮ್ಮ ಸಮಾಜಕ್ಕೀಗ 2 ಎ ಮೀಸಲಾತಿ ಇದೆ. ಆದ್ದರಿಂದ ಕಲ್ಲಿನಾಥ ಸ್ವಾಮೀಜಿ ಇಂತಹ ಹೇಳಿಕೆಗಳನ್ನ ಕೊಡುವುದು ಸರಿಯಲ್ಲ ಎಂದರು.
Advertisement
ಸಿಂಧಗಿ ಮತಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಸ್ಥಳೀಯರಲ್ಲೆ ಸೂಕ್ತರನ್ನ ಆರಿಸಿ ಗೆಲ್ಲಿಸಿ ತರುತ್ತೇನೆ. ಸುಮ್ಮನೆ ಮಾಧ್ಯಮದವರು ನನ್ನ ಹೆಸರು ಪ್ರಸ್ತಾಪಿಸಿ ಕಾಗೆ ಹಾರಿಸುತ್ತಿದ್ದಾರೆ ಎಂದರು.
Advertisement
18 ಗಂಟೆಯಲ್ಲಿ 24 ಕಿಮೀ ವಿಜಯಪುರ ಸೋಲ್ಹಾಪುರ ರಸ್ತೆಯನ್ನ ನಿರ್ಮಾಣ ಮಾಡಿದ ಕಾರ್ಮಿಕರ ಸಾಧನೆಗೆ ಶುಭಾಶಯ. ದೇಶದೆಲ್ಲೆಡೆ ಅಭೂತ ಪೂರ್ವ ರಸ್ತೆಗಳನ್ನ ನಿರ್ಮಾಣ ಮಾಡುತ್ತಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನ ರೋಡಕರಿ ಅಂತ ಕರಿಯುತ್ತಿದ್ದಾರೆ ಎಂದರು.