– ಶವಗಳ ಮುಂದೆ ಸಂಬಂಧಿಕರ ಕಣ್ಣೀರು
ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯ ವಿಮ್ಸ್ ಆಸ್ಪತ್ರೆಯ ಮತ್ತೊಂದು ಅವಾಂತರ ಬಟಾಬಯಲಾಗಿದೆ. ವಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಕೋಲ್ಡ್ ಸ್ಟೋರೇಜ್ ದುರಸ್ತಿ ಹಿನ್ನೆಲೆ ಶವಗಳನ್ನು ಎಲ್ಲೆಂದರಲ್ಲಿ ಶವಗಳನ್ನು ಇರಿಸಲಾಗಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ಮೃತರಾದ ಪ್ರತಿಯೊಬ್ಬರ ಕೋವಿಡ್-19 ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಮೃತ ವ್ಯಕ್ತಿಯ ಕೋವಿಡ್ ಪರೀಕ್ಷಾ ವರದಿ ಬರುವವರೆಗೂ ಶವ ಹಸ್ತಾಂತರಿಸಲು ನಿರಾಕರಣೆ ಮಾಡಲಾಗಿದೆ. ಆದರೆ ಮೃತ ಶವಗಳನ್ನು ಕೋಣೆಯೊಂದರಲ್ಲಿ ಒಂದೆಡೆ ಬೇಕಾಬಿಟ್ಟಿಯಾಗಿ ಇರಿಸಿದ್ದಾರೆ. ಇನ್ನು ಶವಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಕುಟುಂಬಸ್ಥರು ಶವಾಗಾರದ ಮುಂದೆಯೇ ಕಾಲ ಕಳೆಯುವಂತಾಗಿದೆ.
Advertisement
Advertisement
ವಿಮ್ಸ್ ಆಸ್ಪತ್ರೆಯಲ್ಲಿ 10 ಶವಾಗಾರದಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತದೆ. ಕುಂಟುಂಬಸ್ಥ ಬಯಸಿದರೆ ಖಾಸಗಿ ಕೋಲ್ಡ್ ಸ್ಟೋರೇಜ್ ನಲ್ಲಿ ಶವ ಇಡಲು ವ್ಯವಸ್ಥೆ ಮಾಡಲಾಗಿದೆ. ಆದ್ರೆ ಅದಕ್ಕೆ 2500 ರೂ ಹಣ ಪಾವತಿಸಬೇಕು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಬರುವವರೂ ಬಹುತೇಕರು ಬಡವರು. ಹೀಗಾಗಿ ಕುಟುಂಬಸ್ಥರು ಶವಗಳ ಮುಂದೆಯೇ ಕಣ್ಣೀರು ಹಾಕುತ್ತಿದ್ದಾರೆ.