Connect with us

Bellary

ಬಳ್ಳಾರಿಯಲ್ಲಿ ಕೊರೊನಾ ಸುನಾಮಿ- ಒಂದೇ ದಿನ 579 ಪ್ರಕರಣ ಪತ್ತೆ

Published

on

ಬಳ್ಳಾರಿ: ಮಹಾಮಾರಿ ಕೊರೊನಾ ಇಂದು ಗಣಿ ನಾಡು ಬಳ್ಳಾರಿಯಲ್ಲಿ ಹೊಸ ದಾಖಲೆ ಬರೆದಿದ್ದು, ಜಿಲ್ಲೆಯಲ್ಲಿಂದು ಹೊಸದಾಗಿ 579 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ.

ಹಲವು ದಿನಗಳಿಂದ ನೂರು, ಇನ್ನೂರು ಬರುತಿದ್ದ ಕೊರೊನಾ ಪ್ರಕರಣಗಳು, ಇಂದು ಬರೋಬ್ಬರಿ 579 ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದ್ದು, 1,622 ಮಂದಿ ಗುಣಮುಖರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸೋಂಕಿತ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಹೀಗಾಗಿ ಅವರ ಪ್ರಾಥಮಿಕ ಹಂತದ ಸಂಪರ್ಕ ಹೊಂದಿದವರ ಸಂಖ್ಯೆಯೂ ಸಹ ಏರಿಕೆ ಆಗಿದೆ. ಹೀಗಾಗಿ ಸೋಂಕಿತ ಪ್ರಕರಣಗಳು ಈ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಈ ಸಂಖ್ಯೆ ಪ್ರತಿ ದಿನ ಸಾವಿರ ದಾಟುವ ಸಾದ್ಯತೆ ಹೆಚ್ಚಿದೆ. ಪಾಸಿಟಿವ್ ಪ್ರಕರಣಗಳ ಜೊತೆಯಲ್ಲಿ ಸಾವಿನ ಸರಣಿ ಸಹ ಮುಂದುವರೆದಿದ್ದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆ ಆಗಿದೆ. ಸದ್ಯ ಜಿಲ್ಲೆಯಲ್ಲಿ 2,349 ಸಕ್ರಿಯ ಪ್ರಕರಣಗಳಿದ್ದು, ಇಂದು ಕೇವಲ 17 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *