– ಫಾರ್ಮಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಕ್ರಮ
ನವದೆಹಲಿ: ದೇಶದ ಫಾರ್ಮಾ ವಲಯದಲ್ಲಿ ಮತ್ತಷ್ಟು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ 13,600 ರೂ. ಕೋಟಿ ವೆಚ್ಚದಲ್ಲಿ ದೇಶದ್ಯಾಂತ ಏಳು ಬಲ್ಕ್ ಡ್ರಗ್ಸ್ ಮತ್ತು ಮೆಡಿಕಲ್ ಡಿವೈಸ್ ಪಾರ್ಕ್ ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಿರಿಸಿದೆ.
Advertisement
ಈ ಸಂಬಂಧ ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಮಾರ್ಗಸೂಚಿ ಬಿಡುಗಡೆಗೊಳಿಸಿ ಮಾತನಾಡಿ, ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಔಷಧಿ ವಲಯವನ್ನು ಸ್ವಾವಲಂಬಿ ಮಾಡಲಿದ್ದೇವೆ. ಆಮದು ಬದಲಿಗೆ ಹೆಚ್ಚು ಔಷಧಿಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಲಿದ್ದೇವೆ ಎಂದರು.
Advertisement
ಸರ್ಕಾರ ಮೇಗಾ ಪಾರ್ಕ್ ಗಳ ಸ್ಥಾಪನೆಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ನಿಯಮಗಳ ಅನ್ವಯ ಯಾವ ರಾಜ್ಯ ಹೆಚ್ಚು ಆಸಕ್ತಿ ತೋರಿಸಿ ಸೌಲಭ್ಯಗಳನ್ನು ಒದಗಿಸಲು ಮುಂದೆ ಬರಲಿದೆಯೋ ಅಲ್ಲಿ ಪಾರ್ಕ್ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಕರ್ನಾಟಕದಿಂದಲೂ ರಾಯಚೂರಿನಲ್ಲಿ ಬಲ್ಕ್ ಡ್ರಗ್ಸ್ ಮತ್ತು ಮೆಡಿಕಲ್ ಡಿವೈಸ್ ಪಾರ್ಕ್ ಸ್ಥಾಪನೆ ಮಾಡುವ ಪ್ರಸ್ತಾಪ ಬಂದಿದೆ ಎಂದು ಸದಾನಂದಗೌಡ ತಿಳಿಸಿದರು.
Advertisement
Advertisement
ಈಗಾಗಲೇ ಬೇರೆ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಉತ್ತಮ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. ಇದರಿಂದ ಔಷಧಿ ವಲಯ ಒಂದು ಕಡೆ ಸ್ವಾವಲಂಬನೆ ಸಾಧಿಸಿದರೇ ಮತ್ತೊಂದು ಕಡೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.