ಬಗರ್‌ಹುಕುಂ ಸರ್ಕಾರಿ ಜಮೀನು ವಿವಾದ – ಧಗಧಗನೆ ಹೊತ್ತಿ ಉರಿದ ಪಿಡಿಓ ಓಮ್ನಿ

Advertisements

ಚಿಕ್ಕಮಗಳೂರು: ಸರ್ಕಾರಿ ಜಮೀನು ವಿವಾದದಿಂದ ಪಿಡಿಓ ವಾಹನಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಬಾಸಾಪುರ ಗ್ರಾಮದಲ್ಲಿ ನಡೆದಿದೆ.

Advertisements

ಬಗರ್ ಹುಕುಂ ಜಮೀನಿಗಾಗಿ 2 ಕುಟುಂಬಗಳ ನಡುವೆ ಕಲಹ ಉಂಟಾಗಿದ್ದು, ಜಮೀನಿನಲ್ಲೇ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisements

ಘಟನೆ ಸಂಬಂಧ ಪೊಲೀಸರು ಭದ್ರಾವತಿ ತಾಲೂಕಿನ ಪಿಡಿಓ ಹನುಮಂತಪ್ಪನನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್.ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಂಭೈನೂರು ಗ್ರಾಮದಲ್ಲಿ ಬೂದಿಮುಚ್ಚಿದ ವಾತಾವರಣ ನಿರ್ಮಾಣವಾಗಿದೆ. ಶಂಬೈನೂರು ಗ್ರಾಮದಲ್ಲಿ ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisements

Advertisements
Exit mobile version