– ಎಕ್ಸೆಪ್ಟ್ ಮಾಡಿಲ್ಲಾಂದ್ರೆ ತೊಂದರೆಯಾಗುತ್ತೆಂದು ಆವಾಜ್
ವಾಷಿಂಗ್ಟನ್: ಸಾಮಾಜಿಕ ಜಾಲತಾಣದ ಹುಚ್ಚು ಕೆಲವರಿಗೆ ಯಾವ ರೀತಿ ಹಿಡಿದಿರುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಳ್ಳಲಿಲ್ಲವೆಂದು ವ್ಯಕ್ತಿ ತನ್ನ ಮಾಜಿ ಬಾಸ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ.
Advertisement
ಅಮೆರಿಕದ ಉತ್ತರ ಡಕೋಟಾದ 29 ವರ್ಷದ ಕ್ಯಾಲೆಬ್ ಬರ್ಸಿಕ್ ತನ್ನ ಮಾಜಿ ಬಾಸ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆದರೆ ವ್ಯಕ್ತಿ ಇದನ್ನು ಎಕ್ಸೆಪ್ಟ್ ಮಾಡಿಕೊಂಡಿಲ್ಲ. ಇದರಿಂದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ನೆಟ್ಟಿಗರು ಶಾಕ್ಗೆ ಒಳಗಾಗಿದ್ದಾರೆ. ನಿತ್ಯ ಕೋಟ್ಯಂತರ ಜನ ಫ್ರೆಂಡ್ ರಿಕ್ವೆಸ್ಟ್ ಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಇರುತ್ತಾರೆ ಆದರೆ ಈ ವ್ಯಕ್ತಿ ಮಾತ್ರ ತನ್ನ ಮಾಜಿ ಬಾಸ್ಗೆ ಕೊಲೆ ಬೆದರಿಕೆ ಹಾಕಿದ್ದಾನೆ.
Advertisement
Advertisement
ಕ್ಯಾಲೆಬ್ ಬರ್ಸಿಕ್ ತನ್ನ ಮಾಜಿ ಬಾಸ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಎರಡು ದಿನವಾದರೂ ಎಕ್ಸೆಪ್ಟ್ ಮಾಡಿಕೊಳ್ಳದ್ದಕ್ಕೆ ಅವರ ಮನೆಗೇ ತೆರಳಿದ್ದಾನೆ. ಅಲ್ಲದೆ ಮಾಜಿ ಬಾಸ್ ಮನೆಗೆ ತೆರಳಿ ಮನೆ ಬಾಗಿಲನ್ನು ಕಾಲಿಂದ ಒದ್ದು, ಬೆದರಿಕೆ ಹಾಕಿದ್ದಾನೆ.
Advertisement
ಈ ಘಟನೆ ಬಳಿಕ ಡಿಸೆಂಬರ್ 29ರಂದು ಬರ್ಸಿಕ್ನನ್ನು ಬಂಧಿಸಲಾಗಿದ್ದು, ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಬರ್ಸಿಕ್ ತನ್ನ ಮಾಜಿ ಬಾಸ್ಗೆ ಕ್ರಿಸ್ಮಸ್ ದಿನ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಎರಡು ದಿನವಾದರೂ ತನ್ನ ಫ್ರೆಂಡ್ ರಿಕ್ವೆಸ್ಟ್ ಕುರಿತು ಉತ್ತರಿಸದಿದ್ದಾಗ ಕೋಪಗೊಂಡಿದ್ದಾನೆ. ಬಳಿಕ ತನ್ನ ಮಾಜಿ ಬಾಸ್ಗೆ ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ನನ್ನ ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಳ್ಳದಿದ್ದಲ್ಲಿ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದೆಲ್ಲ ಆಗಿ ಎರಡು ದಿನಗಳ ಬಳಿಕ ಬರ್ಸಿಕ್ ಬೇರೆ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಮತ್ತೆ ಮಾಜಿ ಬಾಸ್ಗೆ ಮೆಸೇಜ್ ಮಾಡಿದ್ದಾನೆ. ಫ್ರೆಂಡ್ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಲ್ಲವಾದಲ್ಲಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀಯಾ ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೂ ಬಗ್ಗದ್ದಕ್ಕೆ ಬರ್ಸಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನನ್ನ ಮಾಜಿ ಬಾಸ್ ಮನೆಗೆ ಹೊಸ ಡೋರ್ ಬೇಕಿದೆ ಎಂದು ಬರೆದಿದ್ದಾನೆ. ಆದರೆ ಡಿಸೆಂಬರ್ 26ರ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಗಮನಿಸಿದಾಗ ಬರ್ಸಿಕ್ ತನ್ನ ಮಾಜಿ ಬಾಸ್ ಮನೆಯ ಬಾಗಿಲಿಗೆ ಒದೆಯುತ್ತಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.