– ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಸಿದ್ದ ಯುವತಿ
– ಅನುಮಾನಾಸ್ಪದವಾಗಿ ಸಾವಿಗೆ ಶರಣು
ಶಿವಮೊಗ್ಗ: ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಲಲಿತಾ (23) ಎಂದು ಗುರುತಿಸಲಾಗಿದೆ. ಈಕೆ ಶಿವಮೊಗ್ಗ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದಳು.
Advertisement
Advertisement
ಮೃತ ವಿದ್ಯಾರ್ಥಿನಿ ಲಲಿತಾ ರಾಯಚೂರು ಮೂಲದವಳಾಗಿದ್ದು, ಲಲಿತಾ ತಂದೆ ವೆಂಕಟೇಶ್ ಅವರು ಶಿಕ್ಷಕರಾಗಿದ್ದು ಭದ್ರಾವತಿಯಲ್ಲಿ ವಾಸವಾಗಿದ್ದರು. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು.
Advertisement
ಲಲಿತಾ ನಿನ್ನೆ ರಾತ್ರಿ 2 ಗಂಟೆಯವರೆಗೆ ಕೊಠಡಿಯಲ್ಲಿ ಓದುತ್ತಿದ್ದಳು. ಆದರೆ ಮುಂಜಾನೆ ಕೊಠಡಿಯಿಂದ ಲಲಿತಾ ಹೊರ ಬರದೆ ಇದ್ದದನ್ನು ಗಮನಿಸಿ ಬಾಗಿಲು ಬಡಿದಿದ್ದಾರೆ. ಆದರೂ ಬಾಗಿಲು ತೆಗೆದಿಲ್ಲ. ನಂತರ ಅನುಮಾನಗೊಂಡ ಆಕೆಯ ಸಹಪಾಠಿಗಳು ಹಾಸ್ಟೆಲ್ ವಾರ್ಡನ್ ಅವರಿಗೆ ವಿಷಯ ತಿಳಿಸಿದ್ದಾರೆ. ನಂತರ ಕೊಠಡಿ ಬಾಗಿಲು ಒಡೆದು ನೋಡಿದಾಗ ಲಲಿತಾ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement
ನಂತರ ಆಕೆಯ ಸ್ನೇಹಿತರು ಅವರ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಹಾಸ್ಟೆಲ್ಗೆ ಆಗಮಿಸಿದ ಬಳಿಕ ಆಕೆಯ ಮೃತದೇಹವನ್ನು ಪೊಲೀಸರು ಕೆಳಗೆ ಇಳಿಸಿದ್ದಾರೆ.
ಮೃತ ಲಲಿತಾ ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ತಿಳಿಸಿದ್ದಾರೆ. ಘಟನೆ ನಂತರ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಲಲಿತಾ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ ನೀಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೇ ಆಕೆಯ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ.