CricketLatestMain PostNationalSportsUncategorized

ಫೋರ್ಬ್ಸ್  ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್

ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ವಿಶ್ವದ ಅತಿ ಹೆಚ್ಚು ಗಳಿಕೆಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಆಟಗಾರರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಟಾಪ್-100 ಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಟಾಪ್ 100ರಲ್ಲಿ ಗುರುತಿಸಿಕೊಂಡ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಗಳಿಕೆಯ ಟಾಪ್-100 ಆಟಗಾರರಲ್ಲಿ 66ನೇ ಸ್ಥಾನದಲ್ಲಿದ್ದಾರೆ. ಅವರು 2019-2020ರಲ್ಲಿ ಮಧ್ಯದಲ್ಲಿ 26 ಮಿಲಿಯನ್ ಡಾಲರ್ (ಸುಮಾರು 196 ಕೋಟಿ ರೂ.) ಗಳಿಸಿದ್ದಾರೆ ಎಂದು ತಿಳಿಸಲಾಗಿದೆ.

ಫೋರ್ಬ್ಸ್ ಪಟ್ಟಿಯಲ್ಲಿ ಸ್ವಿಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಫುಟ್ಬಾಲ್ ತಾರೆ ಪೋರ್ಚುಗಲ್‍ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನ ಹಿಂದಿಕ್ಕಿದ್ದಾರೆ. ಫೆಡರರ್ 106.3 ಮಿಲಿಯನ್ ಡಾಲರ್ (ಸುಮಾರು 802 ಕೋಟಿ ರೂ.) ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಕ್ರಿಸ್ಟಿಯಾನೊ ರೊನಾಲ್ಡೊ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಹಾಗೂ ಲಿಯೋನೆಲ್ ಮೆಸ್ಸಿ 104 ಮಿಲಿಯನ್ ಡಾಲರ್ (ಸುಮಾರು 785 ಕೋಟಿ ರೂ.) ಗಳಿಸಿದ್ದಾರೆ.

ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೊನಾಲ್ಡೊ ಕಳೆದ ವರ್ಷ 105 ಮಿಲಿಯನ್ ಡಾಲರ್ (ಸುಮಾರು 793 ಕೋಟಿ ರೂ.) ಗಳಿಸಿದ್ದರು. ಅದೇ ಸಮಯದಲ್ಲಿ, ಮೆಸ್ಸಿ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ರೊನಾಲ್ಡೊಗಿಂತ ಕೇವಲ 8 ಕೋಟಿ ಕಡಿಮೆ ಗಳಿಸಿದ್ದರು. ಈ ಬಾರಿಯ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 5 95.5 ಮಿಲಿಯನ್ (ಸುಮಾರು 721 ಕೋಟಿ ರೂ.) ಗಳಿಸಿದ್ದಾರೆ.

ಫೆಡರರ್ ಸಾಧನೆ:
ಹೆಚ್ಚು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಫೆಡರರ್, ಬ್ರಾಂಡ್ ಅನುಮೋದನೆಯಿಂದ ಸುಮಾರು 7 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದರು. ಫೆಡರರ್ ಮೊದಲ ಸ್ಥಾನಕ್ಕೆ ಜಿಗಿದು ಈ ಸಾಧನೆ ಮಾಡಿದ ಮೊದಲ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯಾರು, ಗಳಿಕೆ ಎಷ್ಟು?:
1. ರೋಜರ್ ಫೆಡರರ್- ಸ್ವಿಟ್ಜರ್ಲೆಂಡ್- ಟೆನಿಸ್- 802 ಕೋಟಿ ರೂ.
2. ಕ್ರಿಸ್ಟಿಯಾನೊ ರೊನಾಲ್ಡೊ- ಪೋರ್ಚುಗಲ್- ಫುಟ್ಬಾಲ್- 793 ಕೋಟಿ ರೂ.
3. ಲಿಯೋನೆಲ್ ಮೆಸ್ಸಿ- ಅರ್ಜೆಂಟೀನಾ- ಫುಟ್ಬಾಲ್- 785 ಕೋಟಿ ರೂ.
4. ನೇಮರ್- ಬ್ರೆಜಿಲ್- ಫುಟ್ಬಾಲ್- 721 ಕೋಟಿ ರೂ.
5. ಲೆಬೋರ್ನ್ ಜೇಮ್ಸ್- ಅಮೆರಿಕ- ಬ್ಯಾಸ್ಕೆಟ್‍ಬಾಲ್- 453 ಕೋಟಿ ರೂ.

ಮಹಿಳೆಯರಲ್ಲಿ ನವೋಮಿ ಒಸಾಕಾಗೆ ಅಗ್ರಸ್ಥಾನ:
ಮಹಿಳೆಯರಲ್ಲಿ ಜಪಾನ್‍ನ ಟೆನಿಸ್ ತಾರೆ ನವೋಮಿ ಒಸಾಕಾ ವಿಶ್ವದ ಅತಿ ಹೆಚ್ಚು ಹಣ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಅವರು ಸುಮಾರು 284 ಕೋಟಿ ರೂ. ಗಳಿಸಿದ್ದಾರೆ. ಒಸಾಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರೆ ಅತಿ ಹೆಚ್ಚು ಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನದಲ್ಲಿದ್ದಾರೆ. ಸೆರೆನಾ ಈ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಒಸಾಕಾ ಸತತ ಎರಡು ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ. ಅವರು 2018ರಲ್ಲಿ ಯುಎಸ್ ಓಪನ್ ಮತ್ತು 2019ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದಿದ್ದರು. ಅದೇ ಸಮಯದಲ್ಲಿ ಸೆರೆನಾ 23 ಗ್ರ್ಯಾಂಡ್ ಸ್ಲ್ಯಾಮ್‍ಗಳನ್ನು ಗೆದ್ದಿದ್ದಾರೆ.

Leave a Reply

Your email address will not be published.

Back to top button