ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಸಿನಿಮಾದ 5ನೇ ಸಾಂಗ್ ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿದೆ.
ಫೀಲ್ ದಿ ಪವರ್ ಎಂಬ ಲಿರಿಕಲ್ನಿಂದ ಪ್ರಾರಂಭವಾಗುವ ಈ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್(10 ಲಕ್ಷ)ಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದ್ದು, ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Advertisement
Advertisement
ಈ ಹಾಡಿನಲ್ಲಿ ಅಪ್ಪು ದಾಡಿ ಬಿಟ್ಟು, ಕೈನಲ್ಲಿ ಗನ್ ಹಿಡಿದು, ರಗಡ್ ಲುಕ್ನಲ್ಲಿ ಮಿಂಚಿರುವ ಫೋಟೋ ಇದೆ. ಈ ಹಾಡಿಗೆ ಶಂಕರ್ ಶೇಷಗಿರಿ ಕಂಠದಾನ ಮಾಡಿದ್ದು, ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದಾರೆ. ಜೊತೆಗೆ ಈ ಹಾಡಿನಲ್ಲಿ ಪುನೀತ್ಗೆ ಜಾನಿ ನೃತ್ಯ ನಿರ್ದೇಶನ ಮಾಡಿದ್ದು, ಎಸ್ ತಮನ್ ಸಂಗೀತಾ ಸಂಯೋಜಿಸಿದ್ದಾರೆ.
Advertisement
Advertisement
ಪ್ರೇಕ್ಷಕರಿಂದ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 1 ರಂದು ಬಿಡುಗಡೆಯಾಗಿಲಿರುವ ಯುವರತ್ನ ಸಿನಿಮಾ ಪುನೀತ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಯುವರತ್ನ ಸಿನಿಮಾದಲ್ಲಿ ಪುನೀತ್ಗೆ ಜೋಡಿಯಾಗಿ ಸುಯೇಶಾ ಹಾಗೂ ಸೋನು ಗೌಡ ಮಿಂಚಿದ್ದಾರೆ. ಈ ಮುನ್ನ ಪುನೀತ್ ರಾಜ್ ಕುಮಾರ್ ಅಭಿನಯದ ರಾಜುಕುಮಾರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ಧನಂಜಯ್, ಪ್ರಕಾಶ್ರಾಜ್ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.