ಬೆಂಗಳೂರು: ನಗರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಲಸಿಕೆ ಹಾಕಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗಲಿದೆ ಎಂದು ಪ್ರಕಟಿಸಿದ ಬೆನ್ನಲ್ಲೇ ಒಂದೇ ಬಾರಿಗೆ 800ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಲಗ್ಗೆ ಇಟ್ಟಿದ್ದಾರೆ.
Advertisement
Advertisement
ಕೆಲವರು ಆನ್ಲೈನ್ ಮೂಲಕ ನೋಂದಣಿ ಮಾಡಿದ್ದರೆ ಇನ್ನು ಕೆಲವರು ಎರಡನೇ ಡೋಸ್ ಪಡೆಯಲು ಆಸ್ಪತ್ರೆಗೆ ಸೇರಿದ್ದರು. ಬೆಳಗ್ಗಯಿಂದಲೂ ಜನ ಲಸಿಕೆ ಹಾಕಿಸಿಕೊಳ್ಳಲು ಸರದಿಯಲ್ಲಿ ನಿಂತಿದ್ದರು. ಈ ಸಾಲಿನಲ್ಲಿ 45 ವರ್ಷ ಮೇಲ್ಪಟ್ಟವರು 60 ವರ್ಷ ಮೇಲ್ಪಟ್ಟವರು ಇದ್ದರು.
Advertisement
Advertisement
ಭಾರತದಲ್ಲಿ ಹಂತ ಹಂತವಾಗಿ ವಿತರಣೆ ಆರಂಭಿಸಿದ್ದರೂ ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಜನ ಹಿಂದೇಟು ಹಾಕಿದ್ದರು. ಆರಂಭದ ದಿನಗಳಲ್ಲಿ ಲಸಿಕೆ ವಿತರಣೆಯ ಟಾರ್ಗೆಟ್ ಪೂರ್ಣಗೊಳಿಸಲು ಬಿಬಿಎಂಪಿ ಹರಸಾಹಸಪಟ್ಟಿತ್ತು.
ಜನರಿಂದ ನೀರಸ ಪ್ರತಿಕಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಏ.11 ರಿಂದ 14 ರವರೆಗೆ ದೇಶಾದ್ಯಂತ ಲಸಿಕೆ ಉತ್ಸವ ಆಯೋಜಿಸಲಾಗಿತ್ತು. ಆದರೆ ಎರಡನೇ ಅಲೆ ಸುನಾಮಿಯಂತೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನ ಈಗ ಲಸಿಕೆ ಹಾಕಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.