ಪ್ರೇಕ್ಷಣೀಯ ಸ್ಥಳಗಳ ನಿರ್ಬಂಧ ತೆರವುಗೊಳಿಸಿ ಡಿಸಿ ಎಂ.ಆರ್ ರವಿ ಆದೇಶ

ಚಾಮರಾಜನಗರ: ಜಿಲ್ಲೆಯ ಪ್ರೇಕ್ಷಣೀಯ ತಾಣಗಳಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜುಲೈ 2ರಿಂದ ಜಿಲ್ಲೆಯ ಪ್ರವಾಸಿತಾಣಗಳು ಮತ್ತು ಈ ವ್ಯಾಪ್ತಿಯ ಹೊಟೇಲ್, ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು. ಇದೀಗ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ನಿಷೇಧ ತೆರವುಗೊಳಿಸಲಾಗಿದೆ. ಆದರೆ ಜಿಲ್ಲೆಯಾದ್ಯಂತ ಆಗಸ್ಟ್ 2ವರೆಗೆ ಎಲ್ಲಾ ಭಾನವಾರುಗಳು ಸಂಪೂರ್ಣ ಲಾಕ್ ಡೌನ್ ಮುಂದುರಿಯಲಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿದ್ದ ಆರು ಅಂತರ್ ಜಿಲ್ಲಾ ಚೆಕ್‍ಪೋಸ್ಟ್ ಗಳನ್ನು ಸಹ ತೆರವುಗೊಳಿಸಲಾಗಿದೆ. ಕೊರೊನಾ ಹರಡುವುದುನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದತೆ ಹೊರ ಜಿಲ್ಲೆಗಳಿಂದ ಬರುವವರ ಮಾಹಿತಿ ಸಂಗ್ರಹಣೆ ಹಾಗೂ ತಪಾಸಣೆಗಾಗಿ ಈ ಚೆಕ್  ಪೋಸ್ಟ್ ಗಳನ್ನು ತೆರೆಯಾಲಾಗಿತ್ತು. ಇದೀಗ ಚೆಕ್‍ ಪೋಸ್ಟ್ ಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

- Advertisement -

- Advertisement -