ಮುಂಬೈ: ಫೇಸ್ಬುಕ್ಗೆ ವಿದಾಯ ಹೇಳಿದ ಮರುದಿನವೇ ಮುಂಬೈ ವೈದ್ಯರು ಕೋವಿಡ್ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಡಾ.ಮನಿಷಾ ಜಾಧವ್(51) ಮೃತ ವೈದ್ಯೆ. ಇವರು ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್ಗೆ ಬಲಿಯಾಗುವ ಮೊದಲು ಅವರ ಕೊನೆಯ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಇದು ನನ್ನ ಕೊನೆಯ ಗುಡ್ ಮಾನಿರ್ಂಗ್ ಆಗಿದೆ. ಈ ಖಾತೆಯಿಂದ ನಾನು ನಿಮ್ಮನ್ನು ಇಲ್ಲಿ ಭೇಟಿಯಾಗದೇ ಇರಬಹುದು ಎಂದು ಡಾ.ಮನಿಷಾ ಜಾಧವ್ ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಒಂದು ದಿನದ ನಂತರ ಸಾವನ್ನಪಿದ್ದಾರೆ. ಡಾ. ಮನೀಷಾ ಜಾಧವ್ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಹೆಸರುವಾಸಿಯಾಗಿದ್ದರು.
Advertisement
Advertisement
ಮಹಾರಾಷ್ಟ್ರದಲ್ಲಿ 18,000 ವೈದ್ಯರು ಕೋವಿಡ್ ರೋಗಕ್ಕೆ ತುತ್ತಾಗಿದ್ದಾರೆ ಮತ್ತು 168 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.