ಬಳ್ಳಾರಿ: ಕಳೆದ ಮೂರು ತಿಂಗಳಿಂದಲೂ ಗಣಿ ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿಗೆ ಪ್ರವಾಸಿಗರನ್ನ ನಿಷೇಧಿಸಲಾಗಿತ್ತು. ಆದರೆ ಇಂದಿನಿಂದ ಪ್ರವಾಸಿಗರಿಗೆ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ ದೊರೆಯಲಿದೆ.
ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಅದೆಷ್ಟೋ ಮಂದಿ ಪ್ರವಾಸಿಗರಿಗೆ ಕಳೆದ ಮೂರು ತಿಂಗಳಿಂದ ಹಂಪಿ ಸ್ಮಾರಕ ವೀಕ್ಷಿಸದೆ ನಿರಾಸೆಯಾಗಿತ್ತು. ಸದ್ಯ ಆ ನಿರಾಸೆ ಇಂದಿನಿಂದ ದೂರಾಗಲಿದ್ದು, ಪ್ರವಾಸಿಗರು ಹಂಪಿ ಸ್ಮಾರಕ ವೀಕ್ಷಣೆ ಮಾಡಬಹುದಾಗಿದೆ.
Advertisement
Advertisement
ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆಯೇ ವಿನಹಃ ಕಡಿಮೆಯಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಲಾಕ್ಡೌನ್ ರಿಲೀಫ್ಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಇತ್ತೀಚೆಗೆ ಅನುಕೂಲ ಕಲ್ಪಿಸಿದೆ. ಆದರೆ ವಿಶ್ವ ಪಾರಂಪರಿಕ ತಾಣವಾದ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಹಂಪಿಯ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದ್ದು, ಹಂಪಿ ಲಾಕ್ಡೌನ್ನಿಂದ ಮುಕ್ತಿ ಪಡೆದಂತಾಗಿದೆ.
Advertisement
Advertisement
ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 23 ರಂದು ಲಾಕ್ಡೌನ್ ಘೋಷಿಸಿದ ಬಳಿಕ ಸತತ ಮೂರು ತಿಂಗಳ ಕಾಲ ಹಂಪಿ ನೋಡಲು ಯಾರಿಗೂ ಅವಕಾಶವಿರಲಿಲ್ಲ. ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಂಪಿಯೊಳಗೆ ಯಾರನ್ನು ಬಿಡದಂತೆ ಸೂಚನೆ ನೀಡಿತ್ತು. ಅದರನ್ವಯ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಇದುವರೆಗೂ ನಿರ್ಬಂಧ ವಿಧಿಸಿತ್ತು. ಸದ್ಯ ಆ ನಿರ್ಬಂಧವನ್ನ ಸಡಿಲಗೊಳಿಸಿ ಹಂಪಿಯ ಸ್ಮಾರಕಗಳನ್ನ ನೋಡಲು ಅವಕಾಶ ಕಲ್ಪಿಸಿದೆ.