ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಈಗ ಹೈಡ್ರಾಮಾ ನಡೆಯುತ್ತಿದ್ದು ಮುಷ್ಕರವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಸರ್ಕಾರದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಸ್ಸುಗಳನ್ನು ಓಡಿಸದೇ ಇರಲು ನೌಕರರು ತೀರ್ಮಾನ ತೆಗೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯ ಬಳಿಕ ನೌಕರರ ಸಂಘದವರು ಮುಷ್ಕರವನ್ನು ಕೈ ಬಿಡುವುದಾಗಿ ತಿಳಿಸಿದ್ದರು. ಫ್ರೀಡಂ ಪಾರ್ಕ್ಗೆ ತೆರಳಿದ ಬಳಿಕ ವರಸೆ ಬದಲಾಗಿದ್ದು ಮುಷ್ಕರ ಮುಂದುವರಿಸುವ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ. ಇದನ್ನೂ ಓದಿ: ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ
Advertisement
Advertisement
ನೌಕರರು ಸಂಘದ ನಾಯಕರು ಮುಷ್ಕರವನ್ನು ಅಂತ್ಯಗೊಳಿಸುವ ತೀರ್ಮಾನವನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದರು. ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳತ್ತ ಕೆಲ ಬಸ್ಗಳ ಸಂಚಾರ ಆರಂಭವಾಗಿತ್ತು.
Advertisement
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈಗ ಬಸ್ ನಿಲ್ದಾಣದತ್ತ ಪ್ರಯಾಣಿಕರು ಬರುತ್ತಿದ್ದಾರೆ. ದಿಢೀರ್ ತಮ್ಮ ನಿರ್ಧಾರವನ್ನು ಸಾರಿಗೆ ನೌಕರರ ಸಂಘ ಬದಲಿಸಿದ ಕಾರಣ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಈಗ ಅತಂತ್ರರಾಗಿದ್ದಾರೆ.