ಬೆಂಗಳೂರು: ಶನಿವಾರ ಹೆದ್ದಾರಿ ಬಂದ್ ಆಯ್ತು. ಇವತ್ತು ಕುರುಬ ಸಮಾವೇಶ. ಬೆಂಗಳೂರಿಗರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ. ಇವತ್ತೂ ಅಪ್ಪಿತಪ್ಪಿ ಮೈಮರೆತು ರಸ್ತೆಗಿಳಿದ್ರೆ ಅಲ್ಲಲ್ಲಿ ಲಾಕ್ ಆಗ್ತೀರಾ. ಹಾಗಿದ್ರೆ ಬೆಂಗಳೂರಲ್ಲಿಂದು ಎಲ್ಲೆಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ, ಮಾರ್ಗ ಬದಲಾವಣೆ ಮಾಡಲಾಗಿದೆ.
ಎಸ್.ಟಿ. ಮೀಸಲಾತಿಗಾಗಿ ಕುರುಬ ಸಮಾವೇಶಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬಿಐಇಸಿ ಮೈದಾನದಲ್ಲಿ ವೇದಿಕೆ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ರಾಜ್ಯದ ಮೂಲೆಮೂಲೆಯಿಂದ ಕುರುಬ ಸಮಾಜದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಈ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಎರಡು ಸಾವಿರ ಬಸ್, ಒಂದು ಸಾವಿರಕ್ಕೂ ಹೆಚ್ಚು ಟ್ರಕ್ಸ್, ಸಾವಿರಾರು ಕಾರುಗಳು ಬರುವ ನಿರೀಕ್ಷೆ ಇದೆ. ಹೀಗಾಗಿ, ಬೆಂಗಳೂರು-ತುಮಕೂರು, ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಲಿದೆ.
Advertisement
Advertisement
ಲಘು ವಾಹನಗಳಿಗೆ ಯಾವುದೇ ನಿರ್ಭಂಧ ಇಲ್ಲ, ಭಾರಿ ವಾಹನಗಳಿಗೆ ಮಾತ್ರ ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ವರೆಗೆ ಮಾರ್ಗ ಬದಲಾವಣೆ ಮಾಡಿದ್ದಾರೆ. ತುಮಕೂರು ಬೆಂಗಳೂರು ರಸ್ತೆಯಲ್ಲಿ ಐದು ಕಡೆ ಮಾರ್ಗ ಬದಲಿಸಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಎಲ್ಲೆಲ್ಲಿ ಮಾರ್ಗ ಬದಲು?
* ದಾಬಸ್ಪೇಟೆ – ದೊಡ್ಡಬಳ್ಳಾಪುರ ಮಾರ್ಗ
* ದಾಬಸ್ಪೇಟೆ – ಮಾಗಡಿ ಶಿವಗಂಗೆ ರಸ್ತೆ
* ನೈಸ್ ರೋಡ್- ಮಾಗಡಿ, ಮಂಗಳೂರು, ಹಾಸನ, ಕುಣಿಗಲ್ ಮಾರ್ಗ
* ನೈಸ್ ರೋಡ್ – ಮಾಗಡಿ, ಶಿವಗಂಗೆ, ಹೊಸೂರು, ಮೈಸೂರು, ತುಮಕೂರು, ಬೆಂಗಳೂರು
* ನೆಲಮಂಗಲ – ದೊಡ್ಡಬಳ್ಳಾಪುರ, ರೈಲ್ವೆ ಗೊಲ್ಲಹಳ್ಳಿ, ಬೆಂಗಳೂರು, ಹೈದರಾಬಾದ್, ಹೊಸಕೋಟೆ, ಹೊಸೂರು
ಬೆಂಗಳೂರಲ್ಲಿಂದು ಕುರುಬ ಸಮುದಾಯ ಬಲ ಪ್ರದರ್ಶನ – ಎಸ್ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶhttps://t.co/OuComR6GhY#KurubaCommunity #Bengaluru #KannadaNews
— PublicTV (@publictvnews) February 7, 2021
ಭದ್ರತೆಗಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಲಕ್ಷಾಂತರ ಮಂದಿ ಸೇರುವ ಸಾಧ್ಯತೆ ಹಿನ್ನೆಲೆ, ತುಮಕೂರು ಬೆಂಗಳೂರು ರಸ್ತೆ ಹಾಗೂ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಸಜ್ಜಾಗಿದ್ದಾರೆ. ಒಟ್ಟಾರೆ ವಿಕೇಂಡ್ ಎಂದು ಹೋಗುವ ಜನರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.