ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಸಿಗಳು ದೇಶದ 14 ಕೋಟಿ ಜನರಿಗೆ ನಿರುದ್ಯೋಗ ನೀಡಿವೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ದೇಶದ ಯುವಕರಿಗೆ ಮೋದಿಯವರು ಉದ್ಯೋಗ ನೀಡುವದಾಗಿ ಭರವಸೆ ನೀಡಿದ್ದರು. ಪ್ರತಿ ವರ್ಷ ಉದ್ಯೋಗ ಸೃಷ್ಟಿಯ ದೊಡ್ಡ ಕನಸನ್ನು ದೇಶದ ಜನತೆಯ ಮುಂದಿಟ್ಟಿದ್ದರು. ಆದ್ರೆ ಅವರ ಯೋಜನೆ, ನೀತಿಗಳು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿವೆ ಎಂದಿದ್ದಾರೆ.
Advertisement
देश के युवाओं के मन की बात:
रोज़गार दो, मोदी सरकार!
आप भी अपनी आवाज़ युवा कॉंग्रेस के #RozgarDo के साथ जोड़कर, सरकार को नींद से जगाइये।
ये देश के भविष्य का सवाल है। pic.twitter.com/zOt6ng2T0M
— Rahul Gandhi (@RahulGandhi) August 9, 2020
Advertisement
ವಿಡಿಯೋ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೋಟ್ ಬ್ಯಾನ್, ತಪ್ಪು ಜಿಎಸ್ಟಿ ಮತ್ತು ಪೂರ್ವ ತಯಾರಿಗಳಿಲ್ಲದ ಲಾಕ್ಡೌನ್. ಲ ಎಲ್ಲ ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಯುಥ್ ಕಾಂಗ್ರೆಸ್ ಇದರ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಕೆಲಸ ಕೊಡಿ (ರೋಜಗಾರ್ ದೋ) ಅಭಿಯಾನದಲ್ಲಿ ನಮಗೆ ಸಾಥ್ ನೀಡಿ. ನಿದ್ದೆಯಲ್ಲಿರುವ ಸರ್ಕಾರ ಎಚ್ಚೆತ್ತಕೊಳ್ಳಬೇಕಿದೆ. ಇದು ದೇಶದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ