ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಸುರೇಖಾ ಮಾತನಾಡಿದ್ದಾರೆ. ಈ ಬಾರಿಯ ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಕೊರೊನಾ ವಾರಿಯರ್, ಗುಣಮುಖರಾದವರ ಜೊತೆ ಮಾತುಕತೆ ನಡೆಸಿದರು. ಇದರ ಜೊತೆಗೆ ಕೊರೊನಾ ಜಾಗೃತಿ ಮೂಡಿಸಿದರು.
Advertisement
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಸುರೇಖಾ ಅವರು, ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಇದರಿಂದ ಸಾವಿನ ಸಂಖ್ಯೆ ಮತ್ತು ಹರಡುವಿಕೆ ಪ್ರಮಾಣ ತಡೆಯಬಹುದು. ಅನಗತ್ಯ ಜನರೊಂದಿಗೆ ಬೆರೆಯಬಾರದು. ಸಾಧ್ಯವಾದಷ್ಟು ಮನೆಯಲ್ಲಿ ಸುರಕ್ಷಿತವಾಗಿರಬೇಕು. ಪದೇ ಪದೇ ಮೂಗು, ಬಾಯಿ ಕಣ್ಣು ಮುಟ್ಟಿಕೊಳ್ಳಬಾರದು ಎಂದು ಹೇಳಿದರು.
Advertisement
Advertisement
ಇದೇ ವೇಳೆ ವ್ಯಾಕ್ಸಿನ್ ಸುರಕ್ಷಿತವಾಗಿದೆ ಎಲ್ಲರೂ ಪಡೆದುಕೊಳ್ಳಬೇಕು. ನಾನು ಈಗಾಗಲೇ ವ್ಯಾಕ್ಸಿನ್ ಪಡೆದಿದ್ದು ಯಾವುದೇ ಅಡ್ಡ ಪರಿಣಾಮಗಳು ಬೀರಿಲ್ಲ. ಈ ಎಲ್ಲ ಕ್ರಮಗಳಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಬಹುದು ಎಂದು ಮನ್ ಕೀ ಬಾತ್ ನಲ್ಲಿ ಸುರೇಖಾ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement