ಹುಬ್ಬಳ್ಳಿ: ಕಾಂಗ್ರೆಸೇತರ ಪಕ್ಷವೊಂದು ಏಳು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿರುವುದು. ಸ್ವತಂತ್ರ ಭಾರತದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ. ಸರ್ಕಾರ ಸಾರ್ವಜನಿಕರ ತೊಂದರೆಗಳಿಗೆ, ಅವರ ದುಃಖಗಳನ್ನು ಅರಿತು ಸಂವೇದನ ಶೀಲತೆಯಿಂದ ಕೆಲಸ ನಿರ್ವಹಿಸುತ್ತಿದೆ. ಯುದ್ಧೋಪಾದಿಯಲ್ಲಿ ಕೋವಿಡ್ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನವನವನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, 2014 ರಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯದಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. 2019 ಪಕ್ಷದ ಆಡಳಿತ ವೈಖರಿಯನ್ನು ಮೆಚ್ಚಿ ದೇಶದ ಜನರು ಮತಚಲಾಯಿಸಿದ್ದಾರೆ. ಈ ಎರಡು ವರ್ಷದ ಅಧಿಕಾರ ಅವಧಿಯ 24 ತಿಂಗಳಿನಲ್ಲಿ 16 ತಿಂಗಳು ಕೋವಿಡ್ ಕರಿಛಾಯೆಯಲ್ಲಿ ಕಳೆದು ಹೋಗಿದೆ. ಬಹಳಷ್ಟು ಜನರು ತಮ್ಮ ಹತ್ತಿರದವರನ್ನು ಕಳೆದುಕೊಂಡಿದ್ದಾರೆ. ಇದರ ನೋವು ನಮಗೂ ಇದೆ ಭಾರತದಲ್ಲಿ ಕೋವಿಡ್ನಿಂದ ಗುಣಮುಖರಾಗುವವರ ಪ್ರಮಾಣ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್
Advertisement
Advertisement
ಕೊರೊನಾ ಎರಡನೇ ಅಲೆಯ ಆರಂಭದ ಸಂದರ್ಭದಲ್ಲಿ 900 ಟನ್ ಇದ್ದ ಮೆಡಿಕಲ್, ಆಕ್ಸಿಜನ್ ಬೇಡಿಕೆ ಈಗ 9000 ಟನ್ಗೆ ಏರಿಕೆಯಾಗಿದೆ. ಇದನ್ನು ಸರಿದೂಗಿಸಿ ಎಲ್ಲೆಡೆ ಆಕ್ಸಿಜನ್ ದೊರೆಯುವಂತೆ ಮಾಡಲಾಗಿದೆ. ರೆಮಿಡಿಸಿವರ್ ಔಷಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಮಾಡಲು ಇದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಎರೆಡು ಮೂರು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಔಷಧವನ್ನು ಸಹ ಎಲ್ಲರಿಗೂ ಸಿಗುವ ಹಾಗೆ ಮಾಡಲಾಗುವುದು. ಬರುವ ಸವಾಲುಗಳನ್ನು ಎದುರಿಸಿ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಿಲ್ಲಾಡಳಿತದ ನಿರ್ಲಕ್ಷ್ಯ – ವಾರದಿಂದ ಅನ್ಲೋಡ್ ಆಗದೇ ಊರೂರು ಸುತ್ತಿರುವ ಆಕ್ಸಿಜನ್ ಟ್ಯಾಂಕರ್
Advertisement
ದೇಶದ ಆಂತರಿಕ ಬಾಹ್ಯ ಸುರಕ್ಷತೆ ವಿಚಾರದಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸರ್ಕಾರ ಸಾಧಿಸಿದೆ. ದೇಶದ ಗಡಿ ಹಂಚಿಕೊಂಡಿರುವ ರಾಷ್ಟ್ರಗಳು ತಂಟೆ ತಕರಾರು ಮಾಡುತ್ತಿದ್ದವು. ಭೂ ಪ್ರದೇಶಗಳನ್ನು ಆಕ್ರಮಿಸಲು ನೋಡುತ್ತಿದ್ದವು. ನೆರೆಯ ರಾಷ್ಟ್ರ ಚೈನಾದ ಆಕ್ರಮಣ ನೀತಿಗೆ ಅದರದೇ ಭಾಷೆಯಲ್ಲಿ ಉತ್ತರ ನೀಡಿದ್ದೇವೆ. ಭಯೋತ್ಪಾದನೆಯನ್ನು ನಿಯಂತ್ರಿಸಿದ್ದೇವೆ. ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಲಾಕ್ಡೌನ್ ಮುಂದುವರಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಜೂನ್.7 ವರೆಗೆ ಕಾಯಬೇಕು. ಈಗಲೇ ಲಾಕ್ಡೌನ್ ಕುರಿತು ಭವಿಷ್ಯ ನುಡಿಯುವುದು ತಪ್ಪಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಸೂಕ್ತವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದೆ. ಲಾಕ್ಡೌನ್ ಕುರಿತು ಕೂಡ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾವರ್ಕರ್, ಸಂತೋಷ ಚವ್ಹಾಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.