ಬೆಂಗಳೂರು: ಕೊರೊನಾ ಕಾಲದಲ್ಲಿ ತನ್ನದೆ ಯೋಚನೆಯ ಮೂಲಕ ಹೊಸ ಬೋರ್ಡ್ ಗೇಮ್ ಆವಿಷ್ಕಾರ ಮಾಡಿದ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಬೆಂಗಳೂರಿನ ವೀರ್ ಕಶ್ಯಪ್ಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಿದೆ.
Advertisement
ಬೆಂಗಳೂರಿನ ಆರ್ ಆರ್ ನಗರದ ನಿವಾಸಿಗಳಾದ ಕಮಾಂಡರ್ ವಿನಾಯಕ್, ಸಂಗೀತಾ ದಂಪತಿಯ ಮಗ ವೀರ್ ಕಶ್ಯಪ್(10) ಕಳೆದ ವರ್ಷದ ಬೇಸಿಗೆ ರಜೆಗೆ ಅಜ್ಜಿ ಮನೆಗೆ ಹೋಗಿ ಕೊರೊನಾದಿಂದ ಅಲ್ಲಿಯೇ ಉಳಿದುಕೊಂಡಿದ್ದ. ಆ ಸಯಮದಲ್ಲಿ ಅಜ್ಜಿಮನೆಯಲ್ಲಿ ಆಟವಾಡಲು ಬೋರ್ಡ್ ಗೇಮ್ ಇರಲಿಲ್ಲ. ಹಾಗಾಗಿ ಈ 10 ವರ್ಷ ಪ್ರಾಯದ ವೀರ್ ಕಶ್ಯಪ್ ನಾನೇ ಯಾಕೆ ಒಂದು ಬೋರ್ಡ್ ಗೇಮ್ ಆವಿಷ್ಕಾರ ಮಾಡಬಾರದು ಅಂತಾ ಯೋಚಿಸಿ ಕೊರೊನಾ ಯುಗ ಎಂಬ ಹೆಸರನ್ನಿಟ್ಟು ಹೊಸ ಬೋರ್ಡ್ ಗೇಮ್ನ್ನು ಕಂಡುಹಿಡಿದ್ದಾನೆ.
Advertisement
Advertisement
ಈತ ಕಂಡುಹಿಡಿದ ಕೊರೊನಾ ಯುಗ ಗೇಮ್ ಕೋವಿಡ್ನ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುದರೊಂದಿಗೆ ಆಟವಾಡಿವವರು ಈ ನಿಯಮಗಳಿಗೆ ಒಳಗಾಗಿ ಪಾಲನೆ ಮಾಡುವಂತೆ ವೀರ್ ಅನುಷ್ಠಾನ ಮಾಡಿದ್ದಾನೆ. ಈ ಗೇಮ್ ಅಮೆಜಾನ್ನಲ್ಲಿ ಬಿಡುಗಡೆ ಹೊಂದಿ ಎಲ್ಲರ ಗಮನ ಸೆಳೆದಿತ್ತು.
Advertisement
ಈ ಅವಿಷ್ಕಾರವನ್ನು ಗಮಿಸಿರುವ ಕೇಂದ್ರ ಸರ್ಕಾರ ವೀರ್ ಕಶ್ಯಪ್ಗೆ 2021ರ ಬಾಲ ಪುರಸ್ಕಾರ ನೀಡಿ ಗೌರವಿಸಿದೆ. ಹಾಗೆ ಇಂದು ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿ ತನ್ನ ಆವಿಷ್ಕಾರದ ಕುರಿತು ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾನೆ.
ನನ್ನ ಬೋರ್ಡ್ ಗೇಮ್ ಅನ್ನು ಗುರುತಿಸಿ ನನಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ ಹಾಗೆ ನಮ್ಮ ಪ್ರಧಾನಿ ಮೋದಿ ಸರ್ ಜೊತೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗಿಯಾಗಿ ಅವರೊಂದಿಗೆ ಮಾತಾನಾಡಿದ್ದು ಇನ್ನೂ ಹೆಚ್ಚಿನ ಖುಷಿ ಕೊಟ್ಟಿದೆ ಎಂದು ಬಾಲಕ ಮಾಧ್ಯಮಗಳೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
An important message, said in a unique style. Veer Kashyap from Bengaluru created a game that seeks to keep people home and spread awareness about COVID-19. Happy that he has been conferred the Rashtriya Bal Puraskar 2021. pic.twitter.com/Kilbh1jAPS
— Narendra Modi (@narendramodi) January 25, 2021