ವಿಜಯಪುರ: ಭ್ರಷ್ಟಾಚಾರದ ಆರೋಪ ಹೊರಿಸಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳಾ ಸಂಘಟಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ಭಾಷಣದಲ್ಲಿ ಶರಣೆ ಅಕ್ಕಮಹಾದೇವಿ ವಚನದ ಮೂಲಕ ಟಾಂಗ್ ನೀಡಿದ್ದಾರೆ.
Advertisement
ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜದೊಡೆ ಎಂತಯ್ಯ, ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆ ತೊರೆಗಳಿಗೆ ಅಂಜಿದೊಡೆ ಎಂತಯ್ಯ, ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಡಚಿದೊಡೆ ಎಂತಯ್ಯ? ಚನ್ನಮಲ್ಲಿಕಾರ್ಜುನ ದೇವ. ಕೆಳಯ್ಯ ಈ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೇ ಸಮಾಧಾನಿಯಾಗಿರಬೇಕು” ಎಂಬ ವಚನ ಸ್ತುತಿಸಿದರು.
Advertisement
Advertisement
ನಿಂದನೆ ಸ್ತುತಿ ಬರುತ್ತವೆ. ಶಾಂತಿ ಸಮಾಧಾನದಿಂದ ಎದುರಿಸಿ ತೋರಿಸಬೇಕೆಂದು ಅಕ್ಕನ ವಚನದಿಂದ ಕಲಿತಿದ್ದೇನೆ. ಸುಂಸ್ಕೃತ ಮನೆತನದಲ್ಲಿ ಹುಟ್ಟಿ ಇಂಥ ರಾಜಕೀಯ ಪರಿಸ್ಥಿತಿ ಯಲ್ಲಿ ಎಲ್ಲವನ್ನೂ ಎದುರಿಸಿ ನಿಲ್ಲಬೇಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ರೀತಿ ಪ್ರತಿಭಟನೆ ಯಾರು ಮಾಡಿದ್ದಾರೋ ಅವರಿಗೆ ಉತ್ತರ ಕೊಡಲು ಬಯಸುತ್ತೇನೆ, ನಾನು ತಪ್ಪು ಮಾಡಿಲ್ಲ. ಹೀಗಾಗಿ ಯಾವುದೇ ತನಿಖೆಗೆ ಸಿದ್ದ ಎಂದಿದ್ದಾರೆ.
Advertisement
ಹೆಣ್ಣು ಮಕ್ಕಳಾಗಿ ಈ ರೀತಿ ಇನ್ನೊಂದು ಹೆಣ್ಣು ಮಗುವಿನ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಶಶಿಕಲಾ ಜೊಲ್ಲೆ ಭಾವುಕರಾದರು. ಅಕ್ಕಮಹಾದೇವಿ ಹಾಗೂ ಡಾ.ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವೆ. ಒಳ್ಳೆಯ ಕೆಲಸ ಮಾಡಿ ತೋರಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಓರ್ವ ವಿದ್ಯಾರ್ಥಿ ಸಾವು, ಇಬ್ಬರು ಗಂಭೀರ
ಅಂತಿಮವಾಗಿ “ನಾನೂ ಒಬ್ಬ ವಿಶೇಷ ಮಗುವಿನ ತಾಯಿ, ಮಕ್ಕಳ ನೋವು ನನಗಿಂತ ಹೆಚ್ಚು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಹೀಗಾಗಿ ಅಂಥ ಮಕ್ಕಳೊಂದಿಗೆ ನಾನು ಸದಾ ಇರುವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಸಂಗೊಳ್ಳಿಯ ಸೈನಿಕ ಶಾಲೆಯಲ್ಲಿ ಕೆಚ್ಚೆದೆಯ ರಾಯಣ್ಣನಂತ ಸೈನಿಕರನ್ನು ತಯಾರಿಸುತ್ತೇವೆ: ಕಾರಜೋಳ