ವಾಷಿಂಗ್ಟನ್: ಪ್ರಪಂಚದಲ್ಲಿ ಎಲ್ಲಾ ಪುರುಷರು ಮತ್ತು ಮಹಿಳೆಯರು ತ್ವಚೆಯ ಕಾಂತಿಗೋಸ್ಕರ ಹಲವಾರು ರೀತಿಯ ಕ್ರೀಮ್ಸ್, ಸೋಪು, ಮನೆಮದ್ದುಗಳನ್ನು, ಆಯುರ್ವೇದ ಔಷಧಿ, ಟಿಪ್ಸ್ಗಳನ್ನು ಬಳಸುತ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಶ್ವಾನದ ಮೂತ್ರ ಸೇವಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ನಾಯಿಯನ್ನು ನಿಯತ್ತಿನ ಪ್ರಾಣಿ ಎಂದೇ ಕರೆಯುತ್ತಾರೆ. ಗೂಗಲ್ನಲ್ಲಿ ಹುಡುಕಿದರೂ ಕೂಡ ಶ್ವಾನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ತೋರಿಸುತ್ತದೆ. ಈ ಮುಗ್ಧ ಪ್ರಾಣಿ ಶ್ವಾನವನ್ನು ಯುನೈಟೆಡ್ ಸ್ಟೇಟ್ನ ಮನೆಗಳಲ್ಲಿ ಕುಟುಂಬ ಸದಸ್ಯರಲ್ಲಿ ಒಂದು ಪರಿಗಣಿಸಲಾಗುತ್ತದೆ.
Advertisement
Advertisement
ಯುಎಸ್ನ ಲೀನಾ ತನ್ನ ತ್ವಚೆಯ ಕಾಂತಿಯನ್ನು ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿದ ಲೀನಾ, ನಾನು ಪ್ರತಿ ದಿನ ನಾಯಿಯ ಮೂತ್ರವನ್ನು ಕುಡಿಯುತ್ತಿದ್ದೆ, ಇದರಿಂದ ನನ್ನ ಮುಖದಲ್ಲಿದ್ದ ಮೊಡವೆಗಳು ಒಂದು ವಾರದಲ್ಲಿ ಮಾಯಾವಾಯಿತು ಮತ್ತು ನಾಯಿಯ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿದೆ ಎಂದು ತಿಳಿಸಿದ್ದಾಳೆ.
Advertisement
Advertisement
ಅಲ್ಲದೆ ನಾಯಿಯ ಮೂತ್ರವನ್ನು ಕುಡಿಯುವುದರಿಂದ ಕ್ಯಾನ್ಸರ್ ಪರಿಣಾಮವನ್ನು ಸಹ ತಪ್ಪಿಸಬಹುದು. ನಾಯಿ ಮೂತ್ರವು ಹಲವು ರೋಗಗಳಿಗೆ ಮದ್ದು ಎಂದರು ತಪ್ಪಾಗಲಾರದು ಎಂದು ಹೇಳಿದ್ದಾಳೆ.
ಮೊದಲನೇ ಬಾರಿ ಶ್ವಾನದ ಮೂತ್ರ ಕುಡಿದಾಗ ನನಗೆ ಬಹಳ ವಿಚಿತ್ರವಾಗಿ ಅನಿಸಿತು. ಆದ್ರೆ ಎಷ್ಟೋ ತಿಂಗಳಿನಿಂದ ಇದ್ದ ಮುಖದ ಮೇಲಿನ ಮೊಡವೆಗಳು ನಾಯಿ ಮೂತ್ರ ಕುಡಿದ ಒಂದು ವಾರದಲ್ಲಿ ಹೋದವು ಮತ್ತು ಮೊಡವೆಯ ಕಲೆಗಳು ಕೂಡ ಹೋಗಿ ತ್ವಚೆಯ ಕಾಂತಿಯು ಹೆಚ್ಚಾಯಿತು ಎಂದು ಹೇಳಿದಳು.
ಲೀನಾ ಮೂತ್ರ ಸೇವಿಸಿದ ನಂತರ ಈ ವಿಚಾರ ಇದೀಗ ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ.