ಬೆಂಗಳೂರು: ಪೊಲೀಸ್ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಆದೇಶ ಉಲ್ಲಂಘಿಸಿ ಊರುಗಳಿಗೆ ತೆರಳಿದ್ರೆ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದೆ. 4 ಅಂಶದ ಸುತ್ತೋಲೆಯನ್ನು ಹೊರಡಿ ಸಲಾಗಿದ್ದು, ಮುಂದಿನ ಮೂರ್ನಾಲ್ಕು ತಿಂಗಳು ಊರುಗಳಿಗೆ ತೆರಳದೇ ಕೆಲಸದ ಸ್ಥಳದಲ್ಲಿರಬೇಕೆಂದು ಸೂಚಿಸಿದೆ.
Advertisement
ಸುತ್ತೋಲೆ:
1. ತಮ್ಮ ತಮ್ಮ ಹೆಂಡತಿ ಮತ್ತು ಮಕ್ಕಳು ಯಾರಾದರೂ ಊರುಗಳಲ್ಲಿದ್ದರೆ ಅವರುಗಳನ್ನು ಶನಿವಾರ ಮತ್ತು ಭಾನುವಾರ ಅಂದರೆ ದಿನಾಂಕ: 6/6/2020 ಮತ್ತು ದಿನಾಂಕ: 7/6/2020ರೊಳಗೆ ಕರೆದುಕೊಂಡು ಬರುವುದು.
2. ನಂತರದ ದಿನಗಳಲ್ಲಿ 3 ರಿಂದ 4 ತಿಂಗಳು ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಗಳೂರು ನಗರವನ್ನು ಬಿಟ್ಟು ಹೊರಗಡೆ ಹೋಗಬಾರದು.
Advertisement
Advertisement
3. ಒಂದು ವೇಳೆ ಯಾರಾದರೂ ಬೆಂಗಳೂರು ನಗರವನ್ನು ಬಿಟ್ಟು ಬೇರೆ ಊರುಗಳಿಗೆ ಹೋಗಿ ಬಂದಲ್ಲಿ ಅಂಥವರು 5 ದಿನಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು. ನಂತರ ಖುದ್ದಾಗಿ ಸ್ವ ಖರ್ಚಿನಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಬಂದಲ್ಲಿ ಕರ್ತವ್ಯಕ್ಕೆ ಬರತಕ್ಕದ್ದು.
4. ನೀವು ಹೋಮ್ ಕ್ವಾರಂಟೈನ್ನಲ್ಲಿರಬೇಕಾದ 5 ದಿನಗಳನ್ನು ನಿಮ್ಮ ಖಾತೆಯಲ್ಲಿರುವ ಸಾಂದರ್ಭಿಕ ರಜೆಯಲ್ಲಿ ಕಡಿತಗೊಳಿಸಲಾಗುವುದು.