ಹುಬ್ಬಳ್ಳಿ: ಪರಿಸರ ಪ್ರೇಮದಿಂದ ಪೊಲೀಸರು ಬೀಟ್ ಗೊಂದು ಮರ ಎಂಬ ಅಭಿಯಾನ ಮೂಲಕವಾಗಿ ಹುಬ್ಬಳ್ಳಿ ಪೊಲೀಸರು ಪರಿಸರ ಕಾಳಜಿ ಮೆರೆದಿದ್ದಾರೆ.
ಕ್ರೈಂಗಳಿಗೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದ ಪೊಲೀಸ್ ಇಲಾಖೆ ಈಗ ಮತ್ತೊಂದು ಸಾಮಾಜಿಕ ಜವಾಬ್ದಾರಿಗೆ ಮುಂದಾಗಿದೆ. ಹುಬ್ಬಳ್ಳಿ ಪೊಲೀಸರು ಈಗ ಪರಿಸರ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಬೀಟ್ ಗೊಂದು ಮರ ಅಂತ ಗೋಕುಲ್ ಪೊಲೀಸರು ಅಭಿಯಾನ ಆರಂಭಿಸಿದ್ದು ಪೊಲೀಸರ ಪರಸರ ಪ್ರೇಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
Advertisement
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಸಾಕಷ್ಟು ಜನಮನ್ನಣೆ ಪಡೆದಿರುವ ವಿಭಾಗವಾಗಿದೆ. ಈಗ ಹುಬ್ಬಳ್ಳಿ- ಧಾರವಾಡ ಕಮೀಷನರೇಟ್ ಪರಿಸರ ಕಾಳಜಿ ಮೆರೆಯುತ್ತಿದೆ.
Advertisement
Advertisement
ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರೇಟ್ನ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಆಯೋಜಿಸಿರುವ ಬೀಟ್ಗೊಂದು ಮರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಗೋಕುಲ್ ಠಾಣಿ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಕೊಲ್ಲೂರು ಲೇಔಟ್ ಹಾಗೂ ಅಕ್ಷಯ ಕಾಲನಿಯಲ್ಲಿ ಸಸಿ ನೆಡುವ ಮೂಲಕವಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.
ಮನುಷ್ಯ ಮಾಡಿದ ತಪ್ಪಿಗೆ ಕೊರೊನಾದಂತ ರೋಗಗಳು ಇದರಿಂದ ಸೃಷ್ಟಿಯಾಗುತ್ತಿವೆ. ನಿಸರ್ಗದ ಪರಿಸ್ಥಿತಿ ಬಿಗಡಾಯಿಸಿ, ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನೂ ಖರೀದಿಸಬೇಕಾದ ದುಸ್ಥಿತಿ ಬಂದಿದೆ. ನಿಸರ್ಗದತ್ತವಾದ ಸಸ್ಯ ಸಂಪತ್ತಿನ ಮೂಲಕ ಕೊಡುಗೆಯಾಗಿ ಕೊಟ್ಟಿರುವ ಆಮ್ಲಜನಕವನ್ನು ಸರಿಯಾಗಿ ಬಳಸಿಕೊಂಡು, ಉಳಿಸಿಕೊಂಡು ಹೋಗಬೇಕು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ಕೈಗೆತ್ತಿಕೊಂಡಿದೆ. ಇದನ್ನೂ ಓದಿ: ಡಾನ್ಸರ್ಸ್ ಕಷ್ಟಕ್ಕೆ ನಿಂತ ನಿಖಿಲ್ ಕುಮಾರಸ್ವಾಮಿ
ಠಾಣೆಯ 68 ಬೀಟ್ನಲ್ಲಿ 68 ಸಸಿ ನೆಟ್ಟು ಪೋಷಿಸಲಾಗುವುದು. ಅದಕ್ಕೆ ಪೊಲೀಸ್ ಮರ ಎಂದು ನಾಮಕರಣ ಮಾಡಲಾಗಿದ್ದು, ಇದಕ್ಕೆ ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯರು ಕೈಜೋಡಿಸಿರುವುದು ವಿಶೇಷವಾಗಿದೆ.