-ಇನ್ಸ್ಪೆಕ್ಟರ್ ವಿರುದ್ಧ ಕುಟುಂಬಸ್ಥರ ಆಕ್ರೋಶ
ಲಕ್ನೋ: ಪೊಲೀಸರಿಂದ ಥಳಿತಕ್ಕೊಳಗಾದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಜಲೌನ್ ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಯುವತಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ನಿಶು ಚೌಧರಿ ಆತ್ಮಹತ್ಯೆಗೆ ಶರಣಾದ ಯುವತಿ. ಶನಿವಾರ ಯುವತಿಯನ್ನು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಇದರಿಂದ ಒತ್ತಡಕ್ಕೊಳಗಾಗಿ ನಿಶು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ನಿಶು ಕುಟುಂಬಸ್ಥರು ಆಗ್ರಹಿಸಿದ್ದಾರೆ.
Advertisement
Advertisement
ಶುಕ್ರವಾರ ನಿಶು ಬ್ಲದೌ ಮಾರುಕಟ್ಟೆಗೆ ತೆರಳಿದ್ದಳು. ಅಂಗಡಿ ಮಾಲೀಕನೋರ್ವ ಪಾಸ್ಪೋರ್ಟ್ ಕದ್ದಿದ್ದಾರೆ ಎಂದು ನಿಶು ಮತ್ತು ಆಕೆಯ ಇಬ್ರು ಸ್ನೇಹಿತರ ಮೇಲೆ ಆರೋಪಿಸಿದ್ದರು. ಅಂಗಡಿ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿ ಮೂವರನ್ನು ಅವರ ವಶಕ್ಕೆ ನೀಡಿದ್ದ. ಇನ್ಸ್ಪೆಕ್ಟರ್ ಯೋಗೇಶ್ ಪಾಥಕ್ ಮೂವರನ್ನು ವಶಕ್ಕೆ ಪಡೆದು ಕೊತ್ವಾಲಿಯ ಪೊಲೀಸ್ ಠಾಣೆಗೆ ಕರೆದೊಯ್ಯುದು ವಿಚಾರಣೆಗೆ ಒಳಪಡಿಸಿದ್ದರು. ನಂತರ ಮೂವರನ್ನು ಅವರ ಕುಟುಂಬಸ್ಥರ ವಶಕ್ಕೆ ನೀಡಿ, ನಿಶುಳನ್ನು ಶನಿವಾರ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು.
Advertisement
Advertisement
ಮಗಳನ್ನು ಕರೆದುಕೊಂಡ ಹೋದ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಶ್ ಹಲ್ಲೆ ನಡೆಸಿದ್ದಾರೆ. ಮಹಿಳಾ ಪೊಲೀಸ್ ಅನುಪಸ್ಥಿತಿಯಲ್ಲಿ ಮಗಳನ್ನು ಹೇಗೆ ವಶಕ್ಕೆ ಪಡೆದುಕೊಳ್ಳಲಾಯ್ತು. ಠಾಣೆಗೆ ಬಂದ ನಂತ್ರ ನಿಶು ತುಂಬಾ ಒತ್ತಡಕ್ಕೊಳಗಾಗಿದ್ದಳು. ಶನಿವಾರ ಸಹ ಆಕೆಯನ್ನು ವಿಚಾರಣೆಗೆ ಕರೆಯಲಾಗಿತ್ತು. ಒತ್ತಡದಲ್ಲಿ ಸಿಲುಕಿದ್ದರಿಂದ ಮಗಳು ನೇಣಿಗೆ ಶರಣಾಗಿದ್ದಾಳೆ ಎಂದು ನಿಶು ಕುಟುಂಬಸ್ಥರು ಹೇಳಿದ್ದಾರೆ.