ಮಡಿಕೇರಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ 100 ಗಡಿದಾಟುತ್ತಿದೆ. ಸದ್ಯ ಪೆಟ್ರೋಲ್ ಬೆಲೆ 101ರೂ ಆಗಿದ್ದು, ಇದನ್ನು ಖಂಡಿಸಿ ನಾಟ್ ಔಟ್ ಕರ್ನಾಟಕ ಕಾವಲು ಪಡೆ ಸಂಘಟನೆಯ ಕಾರ್ಯಕರ್ತರು ದೇವಾಲಯದಲ್ಲಿ 101 ತೆಂಗಿನಕಾಯಿ ಕಾಯಿ ಒಡೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
Advertisement
ಕುಶಾಲನಗರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ, ವಿನೂತನ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಲಕ್ಷಾಂತರ ಜನರು ಉಪಯೋಗಿಸುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಇಂದು ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷರಾದ ಎಂ ಕೃಷ್ಣ ರವರ ನೇತೃತ್ವದಲ್ಲಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಕುಶಾಲನಗರದ ನಗರದ ಹೃದಯ ಭಾಗದಲ್ಲಿ ಇರುವ ಗಣಪತಿ ದೇವಸ್ಥಾನದ ಮುಂಭಾಗ 101 ತೆಂಗಿನಕಾಯಿ ಒಡೆದು ಪ್ರತಿಭಟನೆ ನಡೆಸಿದರು.
Advertisement
Advertisement
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರವರು ಪೆಟ್ರೋಲ್ ಬೆಲೆ 200 ದಾಟಿದರೆ 200 ಕಾಯಿಗಳನ್ನು ಒಡೆಯುತ್ತಿವೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಚಿಮ್ಮಲಿ. ನಾವು ಸ್ವಾಗತಿಸುತ್ತೇವೆ ಎಂದು ವ್ಯಂಗ್ಯವಾಗಿ ನುಡಿದರು.
Advertisement
ಜನ ಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುವ ಕಾಲ ಸನಿಹದಲ್ಲಿ ಬರುತ್ತದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಾಮಾಜಿಕ ಅಂತರ ಮಾಯ- ಕಿಟ್ಗಾಗಿ ಕ್ಯೂ ನಿಂತ ಕಾರ್ಮಿಕರು