ಮಡಿಕೇರಿ: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ ಮಂಜಿನ ನಗರಿ ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ ಭಕ್ತರಿಗೆ ಕೊರೊನಾದ ಭಯವಿಲ್ಲದೆ ಕೋವಿಡ್ ನಿಯಮಗಳಿಗೆ ಗುಡ್ ಬೈ ಹೇಳಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ದೇವಾಲಯದಲ್ಲೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಓಂಕಾರೇಶ್ವರ ದೇವಾಲಯದಲ್ಲಿ ಜನರು ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಯುಗಾದಿ ಹಬ್ಬದ ಅಂಗವಾಗಿ ನಗರದ ಓಂಕಾರೇಶ್ವರ ದೇವಾಲಯದಲ್ಲಿ. ಇಂದು ವಿಶೇಷ ಪೂಜೆಗಳು ನಡೆಯುತ್ತಿದೆ.
Advertisement
Advertisement
ನಗರ ನಿವಾಸಿಗಳು, ಪ್ರವಾಸಿಗರು ಸೇರಿದಂತೆ ಜನರು ದೇವಾಲಯಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಬರುವವರು ಕೋವಿಡ್ ನಿಯಮಗಳನ್ನು ಮರೆತು ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಮೂಲಿಯಂತೆ ಎಂದಿನಂತೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಪೂಜೆ ಮಾಡುವ ಅರ್ಚಕರು ಮಾಸ್ಕ್ ಹಾಕದೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರೆ ಜನ ಮಾತ್ರ ಇದರ ಅರಿವು ಇಲ್ಲದೇ ಓಡಾಡುತ್ತಿರುವುದು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು. ನಗರದ ಜನರಲ್ಲಿ ಅತಂಕಕ್ಕೆ ಕಾರಣವಾಗಿದೆ.
ಓಂಕಾರೇಶ್ವರ ದೇವಾಯಲಕ್ಕೆ ನಗರದ ನಿವಾಸಿಗಳು ಮಾತ್ರ ಬರುವುದಿಲ್ಲ. ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಮಾಸ್ಕ್ ಹಾಕಿಕೊಂಡು ಪೂಜೆ ಮಾಡುವುದು ಉತ್ತಮ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.