ನವದೆಹಲಿ: ಪುಲ್ವಾಮಾದಲ್ಲಿ ಪತಿಯನ್ನ ಕಳೆದುಕೊಂಡ 2 ವರ್ಷಗಳ ನಂತರ ಮೇಜರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್ ಸೈನ್ಯವನ್ನು ಸೇರಿದ್ದಾರೆ.
View this post on Instagram
Advertisement
2018ರಲ್ಲಿ ಮೇಜರ್ ಧೌಂಡಿಯಾಲ್ ಅವರನ್ನು ನಿತಿಕಾ ಕೌಲ್ ಮದುವೆಯಾಗಿದ್ದರು. 2019ರ ಫೆಬ್ರವರಿಯಲ್ಲಿ ನಡೆದ ಪಿಂಗ್ಲಾಂಗ್ ಆಪರೇಷನ್ ನಲ್ಲಿ ಮೇಜರ್ ದೌಂಡಿಯಾಲ್ ಭಾಗಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ದೌಂಡಿಯಾಕಲ್ ಸೇರಿದಂರೆ ಮೂವರು ಯೋಧರು ವೀರಮರಣ ಅಪ್ಪಿದ್ದರು. ಇದನ್ನೂ ಓದಿ: ಛಿದ್ರ ಛಿದ್ರವಾದ ಆ ಬಸ್ಸಿನಲ್ಲಿದ್ದ 40 ವೀರ ಯೋಧರ ರೋಚಕ ಕಥೆ ನಿಮಗೆ ತಿಳಿದಿರಲೇಬೇಕು
Advertisement
View this post on Instagram
Advertisement
ಈಗ ಅವರ ಪತ್ನಿ ಕೂಡಾ ಪತಿ ಹಾದಿಯಲ್ಲೇ ಕ್ರಮಿಸಿತ್ತಿದ್ದಾರೆ. ದೇಶಸೇವೆ ಮಾಡಲು ಅವರು ಮುಂದೆ ಬಂದಿದ್ದಾರೆ. ನಿತಿಕಾ ಕೌಲ್ ಅವರನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಗಿದೆ. ಒಟಿಎದಲ್ಲಿ ಪಾಸಿಂಗ್ ಪೆರೇಡ್ ಸಮಯದಲ್ಲಿ ಕಾರ್ಗಿಲ್ ಅನುಭವಿ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ ಕೌಲ್ ಅವರು ನಿತಿಕಾ ಕೌಲ್ ಹೆಗಲ ಮೇಲೆ ನಕ್ಷತ್ರಗಳನ್ನು ಹಾಕಿ ಸೈನ್ಯಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
Advertisement
#WATCH | ….I’ve experienced same journey he has been through. I believe he’s always going to be part of my life: Nitika Kaul, wife of Maj Vibhuti Shankar Dhoundiyal who lost his life in 2019 Pulwama attack, at passing out parade at Officers Training Academy in Chennai pic.twitter.com/7cLRlsp39c
— ANI (@ANI) May 29, 2021
ನನ್ನ ಪತಿಯ ಹಾದಿಯಲ್ಲಿಯೇ ನಾನು ಹೋಗುತ್ತಿದ್ದೇನೆ. ಅವರು ಯಾವಾಗಲೂ ನನ್ನ ಜೀವನದ ಭಾಗವಾಗಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ನಿತಿಕಾ ಕೌಲ್ ಪಾಸಿಂಗ್ ಪೆರೇಡ್ನಲ್ಲಿ ಹೇಳಿದರು.