ಇಸ್ಲಾಮಾಬಾದ್: ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಮಹಿಳಾ ಪರ ನಾಯಕಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಪುರುಷರೇನು ರೋಬೋಟ್ ಗಳಲ್ಲ, ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಮಹಿಳೆಯರು ತೊಡುವ ಉಡುಗೆಗಳೇ ಕಾರಣ ಎಂದು ಇಮ್ರಾನ್ ಖಾನ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್
Advertisement
This is the interview
Earlier, PTI spokespersons argued the PM never attributed women’s dress to sexual violence but was speaking generally about pardah for both men and women
Here the PM leaves no room for any doubt (or spin)
A pity the outcry earlier had no impact on him pic.twitter.com/bHCBmFxvyv
— Reema Omer (@reema_omer) June 21, 2021
Advertisement
ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಮಹಿಳೆಯರು ಮೈಮೇಲೆ ಕಡಿಮೆ ಬಟ್ಟೆ ಧರಿಸಿದರೆ ಅದು ಪುರುಷನ ಮೇಲೆ ಪ್ರಭಾವ ಬೀರುತ್ತದೆ. ಯಾಕೆಂದರೆ ಪುರುಷರೇನೂ ರೋಬೋಟ್ ಗಳಲ್ಲ. ಮಹಿಳೆಯರು ತುಂಡು ಬಟ್ಟೆ ತೊಟ್ಟರೆ ಪುರುಷರಿಗೆ ಸಹಜವಾಗಿಯೇ ಪ್ರಚೋದನೆ ಆಗುತ್ತದೆ. ಇದು ಕಾಮನ್ ಸೆನ್ಸ್. ಪ್ರಚೋದನೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ನಲ್ಲಿ ಹಿಂದೂ, ಕ್ರಿಶ್ಚಿಯನ್ನರ ಮೇಲೆ ದಾಳಿ- ಇಮ್ರಾನ್ ಖಾನ್ಗೆ ವಿಶ್ವಸಂಸ್ಥೆ ಎಚ್ಚರಿಕೆ
Advertisement
Imran Khan’s words are not a slip of a tongue or an ‘opinion by an uncle in a drawing room’. It is a public, dangerous threat to the women of our country where they are informed that rape and assault is their own fault. And that their own PM stands with rapists.
— Kanwal Ahmed (@kanwalful) June 21, 2021
Advertisement
ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇಮ್ರಾನ್ ಖಾನ್ ಹೇಳಿಕೆಯನ್ನು ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್ ಟ್ವೀಟ್ ಮಾಡಿ ಇಮ್ರಾನ್ ಖಾನ್ಗೆ ಅನಾರೋಗ್ಯವಿದೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.
https://twitter.com/SyedNasirHShah/status/1407008379244056579
ಪಾಕಿಸ್ತಾನ ಪ್ರಧಾನಮಂತ್ರಿ ಕಚೇರಿಯ ಡಿಜಿಟಲ್ ಮೀಡಿಯಾ ವಿಭಾಗದ ಡಾ. ಅರ್ಸಲ್ ಖಲೀದ್ ಪ್ರತಿಕ್ರಿಯಿಸಿ, ಸಂದರ್ಶನದ ಆಯ್ದ ವಿಡಿಯೋವನ್ನು ಮಾತ್ರ ವೈರಲ್ ಮಾಡಿ ಟೀಕಿಸಲಾಗುತ್ತಿದೆ ಎಂದು ಹೇಳಿ ಇಮ್ರಾನ್ ವಿರುದ್ಧ ಕೇಳಿ ಬಂದ ಆರೋಪವನ್ನು ತಿರಸ್ಕರಿಸಿದ್ದಾರೆ.