ನವದೆಹಲಿ: ನಾಲ್ಕು ರಾಜ್ಯಗಳ ಜೊತೆಯಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಬಹುಮತ ಸಾಬೀತು ಮಾಡುವಲ್ಲಿ ವಿಫಲವಾದ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಈಗ ನಡೆದ ಚುನಾವಣೆಯಲ್ಲಿ ಪುದುಚೇರಿಯನ್ನ ಬಿಜೆಪಿ ತನ್ನ ತೆಕ್ಕಗೆ ತೆಗೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ವಿಶ್ವಾಸಮತ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಡಿಎಂಕೆ ಜೊತೆ ಎದುರಿಸಿತ್ತು. ಆದ್ರೆ ತಮಿಳುನಾಡಿನಲ್ಲಿ ವರ್ಕೌಟ್ ಆದ ತಂತ್ರ ಇಲ್ಲಿ ಯಶಸ್ಸು ಕಂಡಿಲ್ಲ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪ್ರಮುಖ ನಾಯಕರು ಕಮಲ ಹಿಡಿದಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ
Advertisement
Advertisement
ಯಾರಿಗೆ ಎಷ್ಟು ಕ್ಷೇತ್ರ: ಒಟ್ಟು ವಿಧಾನಸಭಾ ಕ್ಷೇತ್ರಗಳು-30
Advertisement
ಇಂಡಿಯಾ ಟುಡೇ-ಆಕ್ಸಿನ್ ಮೈ ಇಂಡಿಯಾ
ಕಾಂಗ್ರೆಸ್+: 6-10
ಬಿಜೆಪಿ+: 20-24
ಇತರೆ: 0-1
Advertisement
ಟೈಮ್ಸ್ ನೌ-ಸಿ ವೋಟರ್
ಕಾಂಗ್ರೆಸ್+: 6-10
ಬಿಜೆಪಿ+: 19-23
ಇತರೆ: 1-2
ಸಿಎನ್ಎಕ್ಸ್
ಕಾಂಗ್ರೆಸ್+: 11-13
ಬಿಜೆಪಿ+: 16-20
ಇತರೆ: 0
ಜನ್ ಕಿ ಬಾತ್
ಕಾಂಗ್ರೆಸ್+: 6-11
ಬಿಜೆಪಿ+: 19-24
ಇತರೆ: 0
ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ
2016ರ ಫಲಿತಾಂಶ: 2016ರಲ್ಲಿ 30 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಅಣ್ಣಾಡಿಎಂಕೆ- 04, ಡಿಎಂಕೆ- 02 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು. 33 ಸದಸ್ಯರ ಪುದುಚೇರಿಯ ವಿಧಾನಸಭೆಯಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ.ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ
ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ
ಇದನ್ನೂ ಓದಿ: ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ