ಹುಬ್ಬಳ್ಳಿ: ಕೊರೊನಾ ವೈರಸ್ ಹಿನ್ನೆಲೆ ಹಲವು ಕಂಪನಿಗಳು ಹಾಗೂ ಧನಿಕರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಹುಬ್ಬಳ್ಳಿಯ ಪಾರ್ಲೆ ಬಿಸ್ಕೆಟ್ ಕಂಪನಿ 53 ಸಾವಿರ ಬಿಸ್ಕೆಟ್ ಪೊಟ್ಟಣಗಳನ್ನು ದಾನವಾಗಿ ನೀಡಿದೆ.
ಹುಬ್ಬಳ್ಳಿಯ ಗೋಕುಲ ಕೈಗಾರಿಕಾ ಪ್ರದೇಶದಲ್ಲಿರುವ ತಯಾರಿಕಾ ಘಟಕದಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಕಂಪನಿ ವತಿಯಿಂದ ಸಾಂಕೇತಿಕವಾಗಿ ಬಿಸ್ಕೆಟ್ ಪೊಟ್ಟಣ ನೀಡಲಾಯಿತು. ಒಟ್ಟು 53 ಸಾವಿರ ಬಿಸ್ಕೆಟ್ ಪೊಟ್ಟಣಗಳನ್ನು ನೀಡಲು ಕಂಪನಿ ಈಗಾಗಲೇ ಸಿದ್ಧತೆ ನಡೆಸಿದೆ.
Advertisement
Advertisement
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್, ಕಲಬುರಗಿ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಕಂಪನಿಯ ಅಧ್ಯಕ್ಷ ಮಹೇಂದ್ರ ಟಕ್ಕರ್, ಪ್ರವೀಣ್, ಧೀರಜ್, ಜಿತಿಲ್,ನಿಖಿಲ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.