– ಗಿಫ್ಟ್ ಕೊಡ್ತೀನಿ ಅಂತ ಪುಸಲಾಯಿಸಿ ಕರೆದೊಯ್ದ
– ಓರ್ವ ಆರೋಪಿ ಅರೆಸ್ಟ್
ಮುಂಬೈ: ಪಾರ್ಕ್ ಮಾಡಿದ್ದ ಬಸ್ಸಿನೊಳಗೆ 19 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ಖಾರ್ಗಾರ್ ನಲ್ಲಿ ನಡೆದಿದೆ.
Advertisement
ಪ್ರಕರಣ ಸಂಬಂಧ ಓರ್ವನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಓರ್ವನಿಗೆ 22 ವರ್ಷ ವಯಸ್ಸಾಗಿದ್ದು, ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬನಿಗೆ 19 ವರ್ಷ ವಯಸ್ಸಾಗಿದ್ದು, ಪಿಜ್ಜಾ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆರೋಪಿ ಹಾಗೂ ಸಂತ್ರಸ್ತೆ ಒಂದೇ ಕಟ್ಟಡದಲ್ಲಿ ವಾಸ ಮಾಡುತ್ತಿರುವವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಫೆಬ್ರವರಿ 3ರಂದು ಆರೋಪಿಯೊಬ್ಬ ಬೈಕ್ ರೈಡ್ ಹೋಗೋಣ, ಹಾಗೆಯೇ ನಿನಗೆ ಉಡುಗೊರೆಯೊಂದನ್ನು ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗೆ ಹೋದಾಗ ಆತ ಒಂದು ಕಡೆ ಬೈಕ್ ನಿಲ್ಲಿಸಿ ಮದ್ಯ ಖರೀದಿ ಮಾಡಿದ್ದಾನೆ. ನಂತರ ಅಂದರೆ ರಾತ್ರಿ 10 ಗಂಟೆ ಸುಮಾರಿಗೆ ಖರ್ಗಾರ್ ನಲ್ಲಿ ಪಾರ್ಕ್ ಮಾಡಿದ್ದ ಬಸ್ಸಿನೊಳಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ.
Advertisement
ಮದ್ಯ ಕುಡಿದು ತೇಲಾಡುತ್ತಿದ್ದಾಗ ಅತ್ಯಾಚಾರ ಎಸಗಿದ್ದಾನೆ. ನಂತರ ಆತನ ಗೆಳೆಯನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲದೆ ಆತನೂ ಅತ್ಯಾಚಾರ ಎಸಗಿದ್ದಾನೆ. ಇಬ್ಬರೂ ತಮ್ಮ ಕಾಮ ತೃಷೆ ತೀರಿಸಿಕೊಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ. ಘಟನೆಯ ಬಳಿಕ ಆಟೋ ಹಿಡಿದು ಮನೆಗೆ ಬಂದಿದ್ದು, ಮರುದಿನ ಪೋಷಕರ ಬಳಿ ನಡೆದ ಘಟನೆ ವಿವರಿಸಿದಾಗಿ ಪೊಲೀಸರ ಬಳಿ ಯುವತಿ ಹೇಳಿದ್ದಾಳೆ.
ಮಗಳ ಮೇಲೆ ಹೀನ ಕೃತ್ಯ ನಡೆದಿರುವುದನ್ನು ಕೇಳಿಸಿಕೊಂಡ ಪೋಷಕರು ಕೂಡಲೇ ಖರ್ಗಾರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.