ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಪ್ಲೋಡ್ ಮಾಡಿದ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.
ಗಂಗೂಲಿ ಸಿದ್ಧತೆ ವೀಕ್ಷಿಸಲು ಶಾರ್ಜಾ ಸ್ಟೇಡಿಯಂಗೆ ತೆರಳಿದ್ದರು. ಈ ವೇಳೆ ಅಲ್ಲಿ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ಗಂಗೂಲಿ ಗ್ರೂಪ್ ಫೋಟೋ ತೆಗೆದಿದ್ದರು. ಇದನ್ನೂ ಓದಿ: ಐಪಿಎಲ್‍ಗಾಗಿ ದುಬೈಗೆ ಹಾರಿದ ಬಂಗಾಳದ ದಿನಗೂಲಿ ಕೆಲಸಗಾರ
Advertisement
Advertisement
ಕ್ರೀಡಾಂಗಣದಲ್ಲಿ ನಿಂತು ಗ್ರೂಪ್ ಫೋಟೋವನ್ನು ತೆಗೆಯುವಾಗ ಹಿಂದುಗಡೆಯಿದ್ದ ಪಾಕಿಸ್ತಾನ ಕ್ರಿಕೆಟಿಗರ ಫೋಟೋ ಸೆರೆಯಾಗಿತ್ತು. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡುವಾಗ ಪಾಕಿಸ್ತಾನ ಕ್ರಿಕೆಟಿಗರ ಫೋಟೋ ಬ್ಲರ್ ಮಾಡಿ ಅಪ್ಲೋಡ್ ಮಾಡಿದ್ದಾರೆ.
Advertisement
ಗಂಗೂಲಿ ಮೂರು ಫೋಟೋ ಅಪ್ಲೋಡ್ ಮಾಡಿದ್ದು ಈಗ ಬ್ಲರ್ ಮಾಡಿದ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಪಾಕ್ ಮಾಜಿ ಆಟಗಾರರಾದ ಜಾವೆದ್ ಮಿಯಾಂದಾದ್, ರಶೀದ್ ಲತೀಫ್, ಮಿಸ್ಬಾ ಉಲ್ ಹಕ್, ಅಜರ್ ಮೊಹಮ್ಮದ್ ಈ ಫೋಟೋದಲ್ಲಿ ಇದ್ದರು. ಯಾವ ಕಾರಣಕ್ಕೆ ಫೋಟೋವನ್ನು ಗಂಗೂಲಿ ಬ್ಲರ್ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.
Advertisement
#IPL2020: @SGanguly99 uses a blurred Pakistan cricketers picture in background from Sharjah Stadium.
Here’s the 2nd picture which was blurred, this is high level of sportsmanship. @I_JavedMiandad @TheRealPCB pic.twitter.com/TTQmHtArBU
— S'yed A'dil سید عادل???? (@SyedAdil101) September 15, 2020
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಅನ್ನು ಸಂಪೂರ್ಣವಾಗಿ ಯುಎಇಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತೆ ನೀಡಲು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿಸಲಾಗಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮೊದಲಾರ್ಧದ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲಾಗಿತ್ತು. ಇದರಿಂದಾಗಿ ಯುಎಇಯಲ್ಲಿ ಕ್ರಿಕೆಟ್ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.